S T Somshekhar: BJPಯ 8 ಶಾಸಕರು ಕಾಂಗ್ರೆಸ್ ಸೇರ್ಪಡೆ?! ಉಪ ಚುನಾವಣೆ ಹೊತ್ತಲ್ಲೇ ಏನಿದು ಶಾಕಿಂಗ್ ನ್ಯೂಸ್?!
S T Somshekhar: ಪ್ರತಿಪಕ್ಷ ಬಿಜೆಪಿ ಮುಖಂಡರ ವರ್ತನೆಯಿಂದ ಬೇಸರಗೊಂಡಿರುವ ಬೆಂಗಳೂರಿನ ಇಬ್ಬರು ಸೇರಿ ಇನ್ನೂ 8 ಮಂದಿ ಬಿಜೆಪಿಯ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ಕರ್ನಾಟಕ(Karnataka) ಮೂರು ವಿಧಾನಸಭಾ ಉಪ ಚುನಾವಣೆಯ(By Election)ಹೊತ್ತಿನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್(S T Somshekhar) ಅವರು ಈ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು ಬೆಂಗಳೂರು ನಗರದ ಇಬ್ಬರು ಶಾಸಕರು ಸೇರಿದಂತೆ 8 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ವರ್ ಅವರಿಂದ ದುಡಿಸಿಕೊಂಡು ಇದೀಗ ಬಿಜೆಪಿ ನಾಯಕರು ಅವರನ್ನು ಕೈಬಿಟ್ಟಿದ್ದಾರೆ. ನನ್ನ ಮೇಲೆ ಯಾವುದೇ ರೀತಿಯ ಶಿಸ್ತು ಕ್ರಮ ಜರುಗಿಸಿದರೂ ನನಗೆ ಭಯವಿಲ್ಲ ಎಂದು ನುಡಿದಿದ್ದಾರೆ.
ಇನ್ನು ಆಗಾಗ ಕಾಂಗ್ರೆಸ್ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸೋಮಶೇಖರ್ ಅವರ ಇಂದಿನ ಹೇಳಿಕೆ ರಾಜಕೀಯದಲ್ಲಿ ಮಹತ್ವದ್ದಾಗಿದ್ದು, ಇವರೂ ಸಹ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದು ಗೊತ್ತೇ ಇದೆ.