Ahmedabad: ನಕಲಿ ನ್ಯಾಯಾಲಯ ಅನ್ನೇ ಸ್ಥಾಪಿಸಿ ಐದು ವರ್ಷಗಳಿಂದ ಜನರಿಗೆ ಮೋಸ

Ahmedabad:

ನಕಲಿ ಕೋರ್ಟು’ನ್ನೇ ಸ್ಥಾಪಿಸಿ ಐದು ವರ್ಷಗಳಿಂದ ಜನರಿಗೆ ಮೋಸ; ಈ ಕಿಲಾಡಿಗಳ ಕಿಲಾಡಿ ಯಾರು ಗೊತ್ತಾ ?

ಅಹ್ಮದಾಬಾದ್‌: ಹಲವು ನಕಲಿಗಳನ್ನು ನಾವು ನೀವೆಲ್ಲ ನೋಡಿದ್ದೇವೆ. ಬಹುಶಃ ಇವತ್ತು ಹೊಸದೊಂದು ವಂಚನೆ ಬಗ್ಗೆ ಕೇಳುವ ಅವಕಾಶವನ್ನು (?!) ವ್ಯಕ್ತಿಯೊಬ್ಬ ನಮಗೆ ಕರುಣಿಸಿದ್ದಾನೆ.

ನಕಲಿ ಪೊಲೀಸ್, ನಕಲಿ ಡಾಕ್ಟರ್‌, ನಕಲಿ ವಕೀಲ ಆಯ್ತು, ಈಗ ಜನರನ್ನು ಯಾಮಾರಿಸುವ ಘಟನೆಗಳು ಅತಿ ಸಾಮಾನ್ಯ. ಇತ್ತೀಚೆಗೆ ನಕಲಿ ಐಪಿಎಸ್ ಆಗಿ ವ್ಯಕ್ತಿಯೊಬ್ಬ ಕಾಣಿಸಿಕೊಂಡು ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದ. ಆದರೆ ಗುಜರಾತಿನ ಈ ಕಿಲಾಡಿ ಪಾತಕಿ ಮಾತ್ರ ನಕಲಿ ಕೋರ್ಟನ್ನೇ ಸೃಷ್ಟಿಸಿದ್ದಾನೆ. ನ್ಯಾಯಾಧೀಶನ ಸೋಗು ಹಾಕಿ ಕಳೆದ 5 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ. ಇದಕ್ಕಾಗಿ ಆತ ನಕಲಿ ನ್ಯಾಯಾಲಯವನ್ನೂ ಸ್ಥಾಪಿಸಿದ್ದ ಅಂದ್ರೆ ಊಹಿಸಿಕೊಳ್ಳಿ ಆತ ಅದೆಷ್ಟು ಖತರ್ನಾಕ್ ಇರಬಹುದೆಂದು.

ನಕಲಿ ನ್ಯಾಯಾಲಯಗುಜರಾತಿನ ಗಾಂಧಿನಗರರಲ್ಲಿ ಕಾರ್ಯಾಚರಿಸುತ್ತಿದ್ದು, ಅದರ ಪಕ್ಕಾ ನಕಲಿ ನ್ಯಾಯಾಧೀಶ ಮೋರಿಸ್ ಸಾಮ್ಯುವೆಲ್ ಕ್ರಿಶ್ಚಿಯನ್ ಎಂಬಾತ ಅಲ್ಲಿ ನ್ಯಾಯ ದಾನ ಮಾಡುತ್ತಿದ್ದ. ಆತ ಮುಖ್ಯವಾಗಿ ಸಿವಿಲ್ ಕೇಸುಗಳಿಗೆ ಕೈ ಹಾಕುತ್ತಿದ್ದ. ಆತ ಭೂ ವಿವಾದ ಹೊಂದಿರುವವರನ್ನು ಬಲೆಗೆ ಕೆಡವಿ ನ್ಯಾಯ ನೀಡುತ್ತಿದ್ದ. ಆಸ್ತಿ ವಿವಾದ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ, ನಂತರ ತಾನು ಸರಕಾರದಿಂದ ನೇಮಿಸಲ್ಪಟ್ಟ ಆರ್ಬಿಟ್ರೇಟರ್ ಎಂದು ಹೇಳಿ ಅವರನ್ನು ನಂಬಿಸುತ್ತಿದ್ದ. ಕೋರ್ಟು ನೀಡುವ ಥರವೇ ನೋಟಿಸ್ ನೀಡುತ್ತಿದ್ದ. ನೋಟಿಸ್‌ ನೀಡಿದ ಬಳಿಕ ಕೋರ್ಟಿಗೆ ಬಂದಾಗ ಅವರ ಪರವಾಗಿ ತೀರ್ಪು ನೀಡುವ ವ್ಯವಹಾರ ಕುದುರಿಸಿಕೊಂಡು ದುಡ್ಡು ಪೀಕುಕೊಳ್ಳುತ್ತಿದ್ದ.

ಗುಜರಾತಿನ ಗಾಂಧಿನಗರದ ಈತ ತನ್ನ ಕಚೇರಿಯನ್ನೇ ನ್ಯಾಯಾಲಯದ ರೀತಿಯಲ್ಲಿ ಪರಿವರ್ತಿಸಿ ರೋನೋವೇಟ್ ಮಾಡಿಕೊಂಡಿದ್ದ. ನ್ಯಾಯಾಧೀಶರ ಪೀಠ ಮತ್ತಿತರ ಪೀಠೋಪಕರಣಗಳನ್ನು ಕೋರ್ಟ್ ಮಾದರಿಯಲ್ಲಿಯೇ ಸ್ಥಾಪಿಸಿಕೊಂಡಿದ್ದ. ಅಲ್ಲಿ ಅವನ ಸಹಚರರೇ ಕೋರ್ಟ್ ಸಿಬ್ಬಂದಿ ಮತ್ತು ವಕೀಲರಂತೆ ನಟಿಸುತ್ತಿದ್ದರು. ಆತನ ನ್ಯಾಯಾಲಯದಲ್ಲಿ ಆತ ವಿಚಾರಣೆ ನಡೆಸಿ ತನ್ನ ಕಕ್ಷಿಗಳ ಪರ ತೀರ್ಪು ನೀಡಿ ಆದೇಶ ಪ್ರತಿಯನ್ನೂ ನೀಡುತ್ತಿದ್ದ. ಕಳೆದ ಐದು ವರ್ಷಗಳಿಂದ ಆತನ ಕೋರ್ಟು ನ್ಯಾಯದಾನ ಮಾಡಿತ್ತು. ಆದರೆ ಇತ್ತೀಚೆಗೆ ಆತ ಹಿಂದೆ ತೀರ್ಪು ನೀಡಿದ ವ್ಯಾಜ್ಯವೊಂದು ಮರಳಿ ಜೀವ ಪಡೆದುಕೊಂಡಾಗ ಮೋರಿಸ್‌ನ ವಂಚನೆ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಸ್ವಾಧೀನದಲ್ಲಿದ್ದ ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ಮೋರಿಸ್ ಇದೇ ರೀತಿ ವಿಚಾರಣೆಯ ನಾಟಕವಾಡಿ ತೀರ್ಪು ನೀಡಿದ್ದ ಆತನ ವಂಚನೆ ಬಯಲಾಗುತ್ತಿದ್ದಂತೆ ಪೊಲೀಸರು ಸಾಮ್ಯುವೆಲ್ ಮತ್ತು ಅವನ ಸಹಚರರನ್ನು ಬಂಧಿಸಿದ್ದಾರೆ. ಅವನ ವಂಚನೆಯ ಶೈಲಿಯನ್ನು ಕಂಡು ಪೊಲೀಸರೇ ದಂಗು ಬಡಿದು ಹೋಗಿದ್ದಾರೆ.

Leave A Reply

Your email address will not be published.