CM Siddaramaiah: 30 ವರ್ಷಗಳಿಂದ ಇರೋ ಸಕ್ಕರೆ ಖಾಯಿಲೆಯನ್ನು ಸಿಎಂ ಸಿದ್ದರಾಮಯ್ಯ ಹೇಗೆ ನಿಯಂತ್ರಣ ಮಾಡ್ತಾರಂತೆ ಗೊತ್ತಾ ?!

CM Siddaramaiah: ಇತ್ತೀಚಿನ ದಿನಗಳಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ(Diabetes)ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ದೊಡ್ಡ ವಯಸ್ಸಿವರೆಗೂ ಈ ಕಾಟ ತಪ್ಪಿದಲ್ಲ. ಸಕ್ಕರೆ ಕಾಯಿಲೆ ಹೇಗೆ ಬರುತ್ತೆ? ಅದನ್ನು ಹೇಗೆ ಗುರುತಿಸುವುದು ಎಂಬುದೇ ತಿಳಿದಿಲ್ಲ. ಕೇವಲ ಚಿಕಿತ್ಸೆ, ವೈದ್ಯರ ಸಲಹೆ ಮೇರೆಗೆ ಇದೆಲ್ಲಾ ನಿಯಂತ್ರಣ ಆಗೋಲ್ಲ. ಬದಲಿಗೆ ಅವರವರ ಆಹಾರ ಕ್ರಮ, ದಿನನಿತ್ಯದ ಚಟುವಟಿಕೆಗಳು ಎಲ್ಲದೂ ಇದರ ಮೇಲೆ ಪರಿಣಾಮ ಬೀರುತ್ತೆ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ(CM Siddaramaiah) ನವರಿಗೂ ಕೂಡ ಶುಗರ್ ಅಥವಾ ಸಕ್ಕರೆ ಖಾಯಿಲೆ ಇದ್ದಿದ್ದು ಬಯಲಾಗಿದೆ. ಆದರೆ ಅವರು ಕೆಲವು ಉಪಾಯಗಳ ಮೂಲಕ ಅದನ್ನು ನಿಯಂತ್ರಣ ಮಾಡಿದ್ರಂತೆ. ಹಾಗಿದ್ರೆ ಮಧುಮೇಹ ನಿಯಂತ್ರಣಕ್ಕೆ ಸಿದ್ದು ಮಾಡಿದ್ದೇನು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ಗೃಹ ಆರೋಗ್ಯ: ಆರೋಗ್ಯ ಸೇವೆ ಮನೆ ಬಾಗಿಲಿಗೆ” ನೂತನ ಮಹತ್ವದ ಜನಾರೋಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ರೋಗಿಗಳೊಂದಿಗೆ zoom call ನಲ್ಲಿ ಮಾತುಕತೆ ನಡೆಸಿ ಮಾತನಾಡಿದ ಅವರು ‘ನಾನು 30 ವರ್ಷಗಳಿಂದ ಸಕ್ಕರೆ ಕಾಯಿಲೆಯನ್ನು ನಿರ್ವಹಿಸುತ್ತಿದ್ದೇನೆ. ಆದರೆ ವ್ಯಾಯಾಮ, ಶಿಸ್ತಿನ ಜೀವನಶೈಲಿಯಿಂದ ಅದನ್ಶು ನಿಯಂತ್ರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಅಲ್ಲದೆ ‘ಸ್ಟಂಟ್ ಹಾಕಿಸಿಕೊಂಡು 24 ವರ್ಷ ಆಯ್ತು. ಪಕ್ಷದ ಕೆಲಸನೂ ಮಾಡ್ತಿದ್ದೀನಿ, ಸರ್ಕಾರದ ಕೆಲಸನೂ ಮಾಡ್ತಿದ್ದೀನಿ, ವ್ಯಾಯಾಮನೂ ಮಾಡ್ತಿದ್ದೀನಿ. ಅರಾಮಾಗಿ ಎಲ್ಲಾ ಕೆಲಸ, ಕಾರ್ಯಗಳಲ್ಲೂ ಭಾಗವಹಿಸುತ್ತಿದ್ದೇನೆ. ಆದರೆ ವೈದ್ಯರು ಹೇಳಿದಂತೆ ಕೇಳುತ್ತೇನೆ. ಹೀಗಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಮತ್ತೆ ಮಾತನಾಡಿದ ಅವರು ‘ಇನ್ನೂ ಮೊಟ್ಟೆ, ಮೀನು, ಮಾಂಸ ತಿಂದರೆ ಡಾಯಾಬಿಟಿಕ್ ಬರುತ್ತದೆ, ಹೆಚ್ಚುತ್ತದೆ ಎನ್ನುವ ತಪ್ಪುಕಲ್ಪನೆ ಇದೆ. ಹಾಗೇನೂ ಇಲ್ಲ. ಮೊಟ್ಟೆ ಮಾಂಸ ಬಿಟ್ಟು ಬರೀ ಅನ್ನ ತಿಂದರೆ ಹೇಗೆ ? ಬ್ಯಾಲೆನ್ಸ್ ಆಹಾರ ಸೇವನೆ ಮುಖ್ಯ ಎಂದು ಹೇಳಿದರು.