Sakshi Mallik: ‘ನಾನು ಹೋಟೆಲ್ ರೂಂನ ಹಾಸಿಗೆಯಲ್ಲಿ ಕುಳಿತಿದ್ದಾಗ.. ಆತ ಸೀದಾ ಬಂದು..’- ಬ್ರಿಜ್ ಭೂಷಣ್ ಸಿಂಗ್ ಮಾಡಿದ್ದೇನೆಂದು ಭಯಾನಕ ಸತ್ಯ ಬಿಚ್ಚಿಟ್ಟ ಸಾಕ್ಷಿ ಮಲಿಕ್

Sakshi Mallik: ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್(Brij Bhushan Singh) ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರ ದೌರ್ಜನ್ಯದ ವಾರ್ ಮುಗಿಯದ ಕಥೆ ಆಗಿದೆ. ಇದೀಗ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೊಮ್ಮೆ ಕುಸ್ತಿಪಟು ಸಾಕ್ಷಿ ಮಲಿಕ್(Sakshi Mallik) ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಹೋಟೆಲ್ ಕೊಠಡಿಯೊಂದರಲ್ಲಿ ಬ್ರಿಜ್ ತನ್ನೊಂದಿಗೆ ನಡೆದುಕೊಂಡಿರುವ ಘಟನೆಯನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

 

ಹೌದು, 2012 ರಲ್ಲಿ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಜ್ಯೂನಿಯರ್ ಚಾಂಪಿಯನ್ ಶಿಪ್ ವೇಳೆ ಆಗ ಕುಸ್ತಿ ಫೆಡರೇಷನ್ ಮುಖ್ಯಸ್ಥರಾಗಿದ್ದ ಬ್ರಿಜ್ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ. ಪೋಷಕರೊಂದಿಗೆ ಮಾತನಾಡಲು ಬ್ರಿಜ್ ನನ್ನನ್ನು ಹೋಟೆಲ್ ಕೊಠಡಿಯೊಳಗೆ ಕಳುಹಿಸಿದ್ದರು. ನಾನು ಪೋಷಕರೊಂದಿಗೆ ಮಾತನಾಡಿ ಕರೆ ಕಟ್ ಮಾಡಿದ ಬಳಿಕ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ನಾನು ಅವರ ಹಾಸಿಗೆ ಮೇಲೆ ಕೂತಿದ್ದೆ. ನನ್ನನ್ನು ಅವರು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರನ್ನು ತಳ್ಳಿ ನಾನು ಅಳಲು ಆರಂಭಿಸಿದೆ. ಯಾವಾಗ ನನ್ನಿಂದ ಅವರಿಗೆ ಬೇಕಾಗಿದ್ದು ಸಿಗಲ್ಲ ಎನಿಸಿತೋ ಆ ಬಳಿಕ ಅವರು ದೂರ ಸರಿದರು. ಬಳಿಕ ನಾನು ಅಲ್ಲಿಂದ ಹೊರಬಂದು ನನ್ನ ಕೊಠಡಿ ಸೇರಿಕೊಂಡೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಅಲ್ಲದೆ ನನ್ನ ಬಾಲ್ಯದಲ್ಲಿಯೂ ನಾನು ಕಿರುಕುಳಕ್ಕೊಳಗಾಗಿದ್ದೇನೆ. ಆದರೆ ನನ್ನ ತಾಯಿ ನನ್ನ ಬೆನ್ನೆಲುಬಾಗಿದ್ದರು. ನಾನು ಅಲ್ಮಾಟಿಯಲ್ಲಿ ಏನಾಯಿತು ಎಂಬುದನ್ನು ಮರೆತುಬಿಡಲು ಪ್ರಯತ್ನಿಸಿದೆ. ನನ್ನ ಪೋಷಕರು ನನಗೆ ಅದೇ ರೀತಿಯ ಸಲಹೆ ನೀಡಿದರು. ಇಷ್ಟೆಲ್ಲ ನಡೆದರೂ ನನ್ನ ಕುಟುಂಬದವರು ಸ್ಪರ್ಧೆ ಹಾಗೂ ತರಬೇತಿಯ ಕುರಿತು ಗಮನ ಹರಿಸಲು ತಿಳಿಸಿದರು. ತರಬೇತಿಯನ್ನು ಮುಂದುವರೆಸಲು ಕೂಡ ನನ್ನ ಕುಟುಂಬದವರು ಅನುಮತಿ ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೇನೆ ಎಂದರು.

Leave A Reply

Your email address will not be published.