Mangalore: ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕ ಸಮುದ್ರ ಪಾಲು

Share the Article

Mangalore: ಅ.22 (ಮಂಗಳವಾರ) ಮುಕ್ಕ ರೆಡ್‌ರಾಕ್‌ ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆಯೊಂದು ನಡೆದಿದೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ ನಿವಾಸಿ, ಕೃಷ್ಣಕುಮಾರ್‌ ಸೋಮಯಾಜಿ ಅವರ ಪುತ್ರ ಪ್ರಜ್ವಲ್‌ (21) ಎಂಬುವವನೇ ನೀರುಪಾಲಾದ ಯುವಕ.

ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಅ.22 ರಂದು ಸಂಜೆ ಮುಕ್ಕ ರೆಡ್‌ರಾಕ್‌ ಬಳಿ ಸಮುದ್ರ ಕಿನಾರೆಯಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್‌ ನೀರುಪಾಲಾಗಿದ್ದು, ಉಳಿದವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯುವಕನ ಸಂಬಂಧಿಕರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Leave A Reply