Petrol Bunk: 1 ಲೀಟರ್‌ ಪೆಟ್ರೋಲ್‌ ನಿಂದ ಬಂಕ್ ಮಾಲೀಕರಿಗೆ ಸಿಗೋ ಲಾಭ ಎಷ್ಟು? ಬರೀ ಇಷ್ಟೇ ಇಷ್ಟಾ ಗುರೂ…?

Share the Article

Petrol Bunk ಇಂದು ಮನುಷ್ಯನ ದಿನನಿತ್ಯ ಅಗತ್ಯ ವಸ್ತುಗಳ ಪೈಕಿ ಇಂಧನಗಳು ಪ್ರಮುಖ ಸ್ಥಾನ ಪಡೆದಿವೆ. ಹೌದು, ಪೆಟ್ರೋಲ್, ಡೀಸೆಲ್ ಇಲ್ಲದೆ ಮನುಷ್ಯನ ದಿನವೇ ಆರಂಭವಾಗದು ಎಂಬ ಹಂತಕ್ಕೆ ನಾವು ತಲುಪಿದ್ದೇವೆ. ಅದಕ್ಕೆ ಎಷ್ಟೇ ಕಾಸ್ಟ್ಲಿ ಆದರೂ ನಾವು ಕೊಂಡು, ವಾಹನಗಳಿಗೆ ಹಾಕಿ ಓಡಾಡುತ್ತೇವೆ. ಅಂದಹಾಗೆ ನಾವೆಲ್ಲರೂ ಕಾಮನ್ ಆಗಿ ಪೆಟ್ರೋಲ್, ಡೀಸೇಲ್ ಅನ್ನು ಬಂಕ್(Petrol Bunk) ಗಳಲ್ಲಿ ಹಾಕಿಸ್ತೇವೆ. ಹೀಗಂದಾಗ ನಿಮ್ಮ ವಾಹನಕ್ಕೆ ಒಂದು ಲೀಟರ್‌ ಪೆಟ್ರೋಲ್‌ ಹಾಕಿದ್ರೆ ಆ ಬಂಕ್‌ ಮಾಲೀಕನಿಗೆ ಸಿಗೋ ಲಾಭವೆಷ್ಟು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮ್ಯಾಟರ್

ಜೀವನ ನಡೆಸಲು, ಹಣ ಗಳಿಸಲು ಸಾಕಷ್ಟು ದಾರಿಗಳಿವೆ. ಇದೆಲ್ಲದರ ನಡುವೆ ಪೆಟ್ರೋಲ್‌ ಬಂಕ್‌ ಮಾಡಿದ್ರೆ ಲೈಫ್‌ ಸೆಟ್ಟಲ್‌ ಆಗುತ್ತೆ ಅಂತ ಹಲವರು ಅಂದುಕೊಂಡಿರುತ್ತಾರೆ. ಪೆಟ್ರೋಲ್‌ ಬಂಕ್‌ ಬ್ಯುಸಿನೆಸ್‌ನಲ್ಲಿ ಹೆಚ್ಚು ಲಾಭ ಅಂತ ಅಂದುಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ ಇಂಧನ ಮಾರಾಟದ ಲಾಭ ತುಂಬಾ ಕಡಿಮೆ.

ಹೌದು, ಪೆಟ್ರೋಲ್, ಡೀಸೆಲ್ ಮಾರಾಟದಿಂಧ ಲಾಭ ಕಡಿಮೆ. ಯಾಕೆಂದರೆ ಒಂದು ಲೀಟರ್ ಪೆಟ್ರೋಲ್ ಮಾರಾಟದಿಂದ ಬಂಕ್ ಮಾಲೀಕರಿಗೆ ರೂ. 2 ರಿಂದ ರೂ.3 ಮಾತ್ರ ಲಾಭ. ಲಾಭ ಬರಬೇಕೆಂದರೆ ಹೆಚ್ಚು ಲೀಟ‌ರ್ ಇಂಧನ ಮಾರಾಟ ಮಾಡಬೇಕು. ಇಷ್ಟೇ ಅಲ್ಲದೆ ಕೇವಲ ಪೆಟ್ರೋಲ್ ಮಾರಾಟದಿಂದ ಲಾಭ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಇತರ ಮಾರ್ಗಗಳಿಂದ ಆದಾಯ ಹೆಚ್ಚಿಸಿಕೊಳ್ಳಲು ಮಾಲೀಕರು ಪ್ರಯತ್ನಿಸುತ್ತಾರೆ.

ಇನ್ನು ಲಾಭ ಕಡಿಮೆಯಿದ್ದರೂ ದಿನಕ್ಕೆಷ್ಟು ಲೀಟರ್ ಮಾರಾಟವಾಗುತ್ತದೆ ಎಂಬುದು ಮುಖ್ಯ. ಹೆಚ್ಚು ಮಾರಾಟವಾದಷ್ಟು ಲಾಭ ಹೆಚ್ಚು. ಅಲ್ಲದೆ ಜಂಕ್ಷನ್‌, ಕಾಲೇಜು, ಹೋಟೆಲ್‌ಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್ ತೆರೆದರೆ ಲಾಭ ಹೆಚ್ಚು. ಹೀಗೆ ಯಾವಾಗಲೂ ಜನನಿಬಿಡ ಸ್ಥಳದಲ್ಲಿರುವ ಪೆಟ್ರೋಲ್‌ ಬಂಕ್‌ನಿಂದ ತಿಂಗಳಿಗೆ ರೂ.1 ಲಕ್ಷದಿಂದ ರೂ.5 ಲಕ್ಷದವರೆಗೆ ನಿವ್ವಳ ಲಾಭ ಗಳಿಸಬಹುದು.

Leave A Reply