Banana: ಬಾಳೆಹಣ್ಣು ಪ್ರಿಯರೇ ಎಚ್ಚರ.. ಈ ಬಾಳೆಹಣ್ಣು ತಿಂದ್ರೆ ಕ್ಯಾನ್ಸರ್ ಬರೋದು ಫಿಕ್ಸ್ !!
Banana: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು( Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಇನ್ನು ಬಾಳೆ ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಪಚ್ಚ ಬಾಳೆ, ಪುಟ್ಟ ಬಾಳೆ, ಏಲಕ್ಕಿ ಬಾಳೆ, ಸುಗಂಧಿ ಬಾಳೆ, ನೇಂದ್ರ ಬಾಳೆ, ಪೂಜೆ ಬಾಳೆ ಹೀಗೆ. ಆದರೆ ಇದೊಂದು ಬಾಳೆ ಹಣ್ಣು ತಿಂದ್ರೆ ನಿಮಗೆ ಕ್ಯಾನ್ಸರ್ ಬರೋದು ಮಾತ್ರ ಫಿಕ್ಸ್.
ಹೌದು, ಈ ರೀತಿಯ ಬಾಳೆ ಹಣ್ಣು ತಿಂದರೆ ನಿಮಗೆ ಕ್ಯಾನ್ಸರ್(Cancer) ಬರೋದು ಫಿಕ್ಸ್. ಅರೇ ಬಾಳೆಹಣ್ಣು ಕೂಡ ಅಪಾಯಕಾರಿಯೇ ಅದು ಹೇಗೆ ಎಂದು ನೀವು ಯೋಚನೆ ಮಾಡ್ತಾ ಇರಬಹುದು. ಸದ್ಯ ಮಾರುಕಟ್ಟೆಯಲ್ಲಿ ಈ ಬಾಳೆಹಣ್ಣು ಹಣ್ಣಾಗಲು ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರಬಹುದು.
ಅಂದಹಾಗೆ ವಿಶೇಷವಾಗಿ ಬಾಳೆ ಹಣ್ಣುಗಳು ಬೇಗನೆ ಹಣ್ಣಾಗಲು ಕಾರ್ಬೈಡ್ ಅನ್ನು ಬಳಸಲಾಗುತ್ತಿದೆ. ಇಂತಹ ರಾಸಾಯನಿಕಗಳಿರುವ ಬಾಳೆಹಣ್ಣು ತಿಂದರೆ ಅವು ದೇಹವನ್ನು ಸೇರಿ ವಿಷವಾಗಿ ಬದಲಾಗುತ್ತದೆ. ಹಾಗಿದ್ರೆ ಈ ರೀತಿಯಾಗಿ ಕೆಮಿಕಲ್ ಮಿಶ್ರಿತವಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಗುರುತಿಸುವುದು ಹೇಗೆ ಎಂದು ತಿಳಿಯುವುದು ಮುಖ್ಯ.
ಕೆಮಿಕಲ್ ಮಿಶ್ರಿತ ಬಾಳೆಹಣ್ಣನ್ನು ಗುರುತಿಸವುದು ಹೇಗೆ?
ನೈಸರ್ಗಿಕವಾಗಿ ಮಾಗಿದ ಬಾಳೆ ಹಣ್ಣುಗಳು ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ, ಕಾರ್ಬೈಡ್ನಂತಹ ಅಪಾಯಕಾರಿ ರಾಸಾಯನಿಕಗಳೊಂದಿಗೆ ಬೇಯಿಸಲಾಗುತ್ತದೆ. ಇದು ಪ್ರಕಾಶಮಾನವಾದ ಬಣ್ಣದಲ್ಲಿ ಕಾಣುತ್ತದೆ. ಈ ಬಾಳೆಹಣ್ಣಿನ ರುಚಿ ಹಸಿ ಬಾಳೆಹಣ್ಣಿನಂತೆ ಇರುತ್ತದೆ. ಆದರೆ ಇಂತಹ ಬಾಳೆಹಣ್ಣು ತಿಂದರೆ ನಿಮಗೆ ಕ್ಯಾನ್ಸರ್ ನಂತಹ ಮಾರಕ ರೋಗ ಬರುವುದು ಫಿಕ್ಸ್.
ಅಲ್ಲದೆ ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳು ತುಂಬಾ ಗಟ್ಟಿಯಾಗಿರುತ್ತವೆ. ಶುಚಿಯಾಗಿ, ದಪ್ಪವಾಗಿ ಕಾಣುವ ಬಾಳೆಹಣ್ಣನ್ನು ಒತ್ತಿದರೆ ಅದು ಪಕ್ವವಾಗಿದೆ ಎಂದು ತಿಳಿದು ಬಂದರೆ ಈ ಬಾಳೆಹಣ್ಣುಗಳು ರಾಸಾಯನಿಕಗಳಿಂದ ಕಲಬೆರಕೆಯಾಗಿದೆ ಎಂದು ಅರ್ಥ. ಇದರೊಂದಿಗೆ ಕುದಿಯುವ ನೀರನ್ನು ಬಕೆಟ್ಗೆ ಹಾಕಿ ಅದಕ್ಕೆ ಬಾಳೆಹಣ್ಣು ಹಾಕಿ.
ಇನ್ನು ಮಾಗಿದ ಬಾಳೆಹಣ್ಣುಗಳು ನೈಸರ್ಗಿಕವಾಗಿ ನೀರಿನಲ್ಲಿ ಮುಳುಗುತ್ತವೆ, ಆದರೆ ರಾಸಾಯನಿಕಗಳಿಂದ ಮಾಗಿದ ಬಾಳೆಹಣ್ಣುಗಳು ನೀರಿನಲ್ಲಿ ತೇಲುತ್ತವೆ. ಈ ರೀತಿಯಾಗಿ ನೀವು ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು. ಕೊನೆಯದಾಗಿ ಬಾಳೆಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿದ್ದರೆ. ಅದು ಎಲ್ಲಾ ಕಡೆಯಿಂದ ಸಮಾನವಾಗಿ ಹಣ್ಣಾಗುತ್ತದೆ. ಇಲ್ಲದಿದ್ದರೆ, ಇದನ್ನು ರಾಸಾಯನಿಕವಾಗಿ ಹಣ್ಣಾಗಿರು ಬಾಳೆಹಣ್ಣು ಎಂದು ಗುರುತಿಸಬಹುದು.