Uttar Pradesh: ಪತಿಯ ಗುಟ್ಕಾ ಚಟಕ್ಕೆ ಬೇಸತ್ತು ಆತನಿಗೆ ಜೀವನವಿಡೀ ಮರೆಯಲಾಗದ ಶಿಕ್ಷೆ ನೀಡಿದ ಪತ್ನಿ!

Share the Article

Uttar Pradesh: ಕೆಲವರಿಗೆ ಜೀವನದಲ್ಲಿ ಒಂದೊಂದು ಅಭ್ಯಾಸಗಲಿರುತ್ತದೆ. ಉದಾಹರಣೆಗೆ ಅದು ಕೆಟ್ಟ ಚಟ ಆಗಿರಬಹುದು ಅಥವಾ ಒಳ್ಳೆಯ ಚಟ ಆಗಿರಲು ಬಹುದು. ಆದ್ರೆ ಇಲ್ಲೊಬ್ಬನ ಗುಟ್ಕಾ ತಿನ್ನುವ ಚಟದಿಂದ ತನ್ನ ಪತ್ನಿಯನ್ನೇ ಕಳೆದುಕೊಂಡಿದ್ದಾನೆ.

ಹೌದು, ಗುಟ್ಕಾ ಸೇವನೆಯ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ. ಕರ್ವಾ ಚೌತ್ನದಂದು ದಿನವಿಡೀ ಉಪವಾಸದಲ್ಲಿದ್ದ ಮಹಿಳೆ ಸಂಜೆಯ ವೇಳೆ ಪತಿಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆಯೂ ಆತ ಗುಟ್ಕಾ ಜಗಿಯುತ್ತಿದನ್ನು ಕಂಡು ಬೇಸರಗೊಂಡಿದ್ದಾಳೆ. ಜೊತೆಗೆ ಈ ವಿಚಾರವಾಗಿ ಜಗಳ ನಡೆದಿದ್ದು, ಬಳಿಕ ಪೂಜಾ ವಿಧಿವಿಧಾನ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಮಹಿಳೆಯನ್ನು ಸಾರಿಕಾ(24) ಎಂದು ಗುರುತಿಸಲಾಗಿದ್ದು, ಈಕೆ ಜಲಾಲ್‌ಪುರ ನಿವಾಸಿಯಾದ ಸುಲಭ್ ನಾಮದೇವ್‌ನನ್ನು 2021 ರಲ್ಲಿ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಪತಿಯ ಗುಟ್ಕಾ ಜಗಿಯುವ ಚಟಕ್ಕೆ ಬೇಸತ್ತು ಸಾಕಷ್ಟು ಸಲ ಆತನೊಂದಿಗೆ ಜಗಳವಾಡಿದ್ದಳು. ಬುದ್ದಿವಾದ ಹೇಳಿದ್ದಳು. ಆದ್ರೆ ಪತಿ ಮಾತ್ರ ತನ್ನ ಕೆಟ್ಟ ಚಟವನ್ನು ಬಿಡಲಿಲ್ಲ. ಅಂತೆಯೇ ಕರ್ವಾ ಚೌತ್ನಂದು ಗುಟ್ಕಾ ತಿನ್ನುವ ವಿಚಾರಕ್ಕೆ ಇಬ್ಬರಿಗೆ ಮತ್ತೆ ಜಗಳ ನಡೆದಿದೆ. ಬಳಿಕ ಪತಿ ಪತ್ನಿ ಇಬ್ಬರೂ ರಾತ್ರಿಯ ಊಟವನ್ನೂ ಮಾಡದೆ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ ಪತಿ ಎದ್ದು ನೋಡಿದಾಗ ಪತ್ನಿ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

Leave A Reply