Golgappa: ಗೋಲ್‌ಗಪ್ಪ ರುಚಿ ಹೆಚ್ಚಿಸಲು ಹಾರ್ಪಿಕ್‌, ಯೂರಿಯಾ ಬಳಕೆ: ವಿಡಿಯೋ ವೈರಲ್

Share the Article

Golgappa: ಗೋಲ್‌ಗಪ್ಪಾ ಅಂದ್ರೆ ಬಹುತೇಕರಿಗೆ ಪಂಚಪ್ರಾಣ ಆಗಿರುತ್ತೆ. ತಿನ್ನೋಕು ಬಹಳ ರುಚಿಯಾಗಿರುತ್ತೆ, ಆದ್ರೆ ಇದರ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್‌ ಮತ್ತು ಯೂರಿಯಾ ಗೊಬ್ಬರ ಬಳಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್‌ ಆಗಿದ್ದು ಗ್ರಾಹಕರಿಗೆ ಶಾಕ್‌ ನೀಡಿದೆ.

ಹೌದು, ಜಾರ್ಖಂಡ್‌ನ ಗರ್ವ್ಹಾದಲ್ಲಿ ಕೆಲ ವ್ಯಕ್ತಿಗಳು ಇಂಥದ್ದೊಂದು ಕೃತ್ಯ ಎಸಗುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು (ಗೋಲ್‌ಗಪ್ಪಾ ) ತಯಾರಿಸಲು ಬಳಸುವ ಹಿಟ್ಟನ್ನು ಕಾಲಿನಲ್ಲಿ ತುಳಿಯುತ್ತಾ ಇದ್ದಿದ್ದು ಕಂಡುಬಂದಿದೆ. ವಿಚಾರಣೆ ವೇಳೆ ಗೋಲ್‌ಗಪ್ಪಾ ರುಚಿ ಹೆಚ್ಚಿಸಲು ಅದಕ್ಕೆ ಯೂರಿಯಾ ಮತ್ತು ಹಾರ್ಪಿಕ್‌ ಬಳಸಿದ್ದನ್ನು ಒಪ್ಪಿಕೊಂಡಿದ್ದಾರೆ.

ವೀಡಿಯೋದಲ್ಲಿ ಇಬ್ಬರು ಪುರುಷರು ತಮ್ಮ ಕಾಲುಗಳಿಂದ ಗೋಲ್ಗಪ್ಪಿನ ಹಿಟ್ಟನ್ನು ಬೆರೆಸುವುದನ್ನು ಕಾಣಬಹುದು. ಪ್ಯಾಕ್ ಮಾಡಿದ ಗೋಲ್‌ಗಪ್ಪಾಗಳು ಕೂಡಾ ಅಲ್ಲೇ ಪಕ್ಕದಲ್ಲಿ ಬಿದ್ದಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಇದೀಗ ವೀಡಿಯೋ ವೈರಲ್ ಆದ ಕೂಡಲೇ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಅಂಗಡಿ ಮಾಲೀಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Leave A Reply