Farmers Arrest: ಹೊಲದ ಬೆಳೆ ಕೂಳೆ ದಹನ ಮಾಡಿದ್ರೆ ಇಲ್ಲಿ ಕಾನೂನು ಕ್ರಮ: ರೂಲ್ಸ್‌ ಉಲ್ಲಂಘಿಸಿದ 14 ರೈತರ ಬಂಧನ

Share the Article

Farmers Arrest: ಭತ್ತ, ಕಬ್ಬು, ಗೋಧಿ, ಜೋಳ ಮುಂತಾದ ಬೆಳೆಗಳ(Crop) ಕಟಾವು(Harvest) ಆದ ಮೇಲೆ ಕೃಷಿ ತ್ಯಾಜ್ಯವನ್ನು(Agricultural Waste) ಹೊಲಗಳಲ್ಲಿ(Field) ಬೆಂಕಿ(Firing) ಕೊಟ್ಟು ಅದನ್ನು ಉರಿಸುವುದು ಮಾಮೂಲು. ಆದರೆ ಹರ್ಯಾಣದಲ್ಲಿ(Haiyan) ಹಾಗಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಠಿಣ ಶಿಕ್ಷೆಯನ್ನು(Punishment) ಅನುಭವಿಸಬೇಕಾಗುತ್ತದೆ. ಇದೀಗ ತಮ್ಮ ಹೊಲಗಳಲ್ಲಿ ಬೆಳೆ ಕೂಳೆ ದಹಿಸಿದ ಆರೋಪದಲ್ಲಿ ಕಳೆದ ಕೆಲವು ದಿನಗಳಲ್ಲಿ ಹರಿಯಾಣದ ಕೈಥಲ್ ಜಿಲ್ಲೆಯ 14 ರೈತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಹರ್ಯಾಣ ಹಾಗೂ ನೆರೆಯ ಪಂಜಾಬ್‌ ರಾಜ್ಯಗಳಲ್ಲಿ ಮುಖ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ನ ಕಟಾವಿನ ನಂತರ ಬೆಳೆ ಕೂಳೆ ದಹನ ಮಾಡಲಾಗುತ್ತದೆ. ಇದು ಪಕ್ಕದ ರಾಜ್ಯ ಹಾಗೂ ದೇಶದ ರಾಜಧಾನಿ ದೆಹಲಿಯ ವಾಯು ಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

ವಾಯು ಮಾಲೀನ್ಯ ತಡೆಗಾಗಿ ಋತರನ್ನು ತಮ್ಮ ಹೊಲದಲ್ಲಿ ಕೊಳೆಯನ್ನು ದಹಿಸದಂತೆ ಕಾನೂನು ತರಲಾಗಿತ್ತು. ಕೊಳೆ ದಹಿಸುವುದರಿಂದ ಕಾರ್ಬನ್‌ ಹೊರ ಸೂಸುವುದಲ್ಲದೆ ಇದು ಪರಿಸರ ಮಾಲೀನ್ಯ ಹಾಗೂ ನಾಗರೀಕರ ಆರೀಗ್ಯದ ಮೇಲೂ ಪರಿಣಾಮ ಬೀರುತ್ತಿದೆ. “ಕಳೆದ ಕೆಲವು ದಿಗಳಲ್ಲಿ ಬೆಳೆ ಕೂಳೆ ದಹಿಸಿದ ಆರೋಪದಲ್ಲಿ 14 ರೈತರನ್ನು ಬಂಧಿಸಲಾಗಿದೆ. ಆದರೆ, ಅನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ” ಎಂದು ಕೈಥಲ್ನ ಪೊಲೀಸ್ ಉಪ ಅಧೀಕ್ಷಕ (ಪ್ರಧಾನ ಕಚೇರಿ) ಬಿರ್ಬಾನ್ ತಿಳಿಸಿದ್ದಾರೆ.

ಬೆಳೆ ಕೂಳೆ ದಹಿಸಿರುವ ಆರೋಪದ ಹಿನ್ನೆಲೆಯಲ್ಲಿ ವಾಯು ಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯ್ದೆಯ ಸೆಕ್ಷನ್ ಮತ್ತು ಇತರ ಕಾನೂನಿನ ಸಂಬಂಧಿತ ನಿಯಮಗಳ ಅಡಿಯಲ್ಲಿ ಬಂಧಿತ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇವು ಮಾತ್ರವಲ್ಲದೆ ಇದೇ ರೀತಿ ಕೊಲೆ ದಹಿಸಿದ ಪಾಣಿಪತ್ ಹಾಗೂ ಯಮುನಾನಗರ್ ಸೇರಿದಂತೆ ಇತರ ಕೆಲವು ಜಿಲ್ಲೆಗಳ ರೈತರ ಮೇಲೂ ಇತ್ತೀಚೆಗೆ ಎಫ್‌ಐಆ‌ರ್ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave A Reply