Award: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಮುಡಿಗೆ ಗರಿ: ಸಹಶಿಕ್ಷಕಿ ರೇಷ್ಮಾ ಕೆ.ಎಸ್ ಅವರಿಗೆ ‘ರಾಜ್ಯ ಮಟ್ಟದ ವಿದ್ಯಾರತ್ನ’ ಪ್ರಶಸ್ತಿ

Award: ಖಾಸಗಿ ಶಾಲಾ ಶಿಕ್ಷಕರ ಗುಣಮಟ್ಟದ ಶೈಕ್ಷಣಿಕ(Educational) ಸಾಧನೆಯನ್ನು ಮನಗಂಡು, ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (RUPSA) 2024-25ನೇ ಸಾಲಿನ ‘ರಾಜ್ಯ ಮಟ್ಟದ ವಿದ್ಯಾರತ್ನ’ ಪ್ರಶಸ್ತಿಗೆ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಷ್ಮಾ ಕೆ.ಎಸ್ ಆಯ್ಕೆ ಮಾಡಿತ್ತು. ಈ ಪ್ರಶಸ್ತಿಯನ್ನು ರುಪ್ಸಾ ಇವರಿಗೆ ಅ.21ರಂದು ನಡೆದ ಜುಬಿಲಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರಿನಲ್ಲಿ ನಡೆದ ರುಪ್ಸಾ ಸಂಭ್ರಮ 2024 ರ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಉಜಿರೆ ನಿವಾಸಿ ಪುಷ್ಪಾಕರ್ ಗೌಡ ಅವರ ಪತ್ನಿ, ರೇಷ್ಮಾ ಕೆ. ಎಸ್ ಅವರ ಸಾಧನೆಯನ್ನು ಮನಗಂಡು ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಿಕ್ಷಕ ಕ್ಷೇತ್ರ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ರುಪ್ಸಾ ಸಂಘಟನೆಯ ರಾಜ್ಯಧ್ಯಕ್ಷ ಡಾ. ಹಾಲನೂರ್ ಲೇಪಾಕ್ಸ್, ಉಪಾಧ್ಯಕ್ಷ ಡಾ. ಮಂಜುನಾಥ್ ರೇವಣ್‌ಕರ್ ಉಪಸ್ಥಿತರಿದ್ದರು.
Your words have a way of touching hearts and inspiring minds Thank you for using your platform to spread love and positivity