South Indians: ವೃದ್ಧರ ಸಂಖ್ಯೆ ಹೆಚ್ಚಳ ಪರಿಣಾಮ ಹೆಚ್ಚು ಮಕ್ಕಳನ್ನು ಹೊಂದುವಂತೆ ಸೂಚನೆ!

South Indians: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ದಕ್ಷಿಣ ಭಾರತದ (South Indians) ಜನರು ಹೆಚ್ಚು ಮಕ್ಕಳನ್ನು ಹೊಂದುವಂತೆ ಮನವಿ ಮಾಡಿದ್ದಾರೆ. ಹೌದು, ಆಂಧ್ರಪ್ರದೇಶದ ಹಲವು ಗ್ರಾಮಗಳು ಮತ್ತು ದೇಶಾದ್ಯಂತ ಕೇವಲ ವೃದ್ಧರು ಮಾತ್ರ ಉಳಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಯುವಕರು ಬೇರೆ ನಗರಗಳಿಗೆ ತೆರಳಿದ್ದಾರೆ ಇನ್ನೂ ಕೆಲವರು ದೇಶವನ್ನೇ ಬಿಟ್ಟು ದೂರ ಉಳಿದಿದ್ದಾರೆ ಇದರ ಸಮತೋಲನಕ್ಕಾಗಿ ಈ ನಿಯಮ ಪಾಲಿಸಬೇಕಾಗಿದೆ ಎಂದಿದ್ದಾರೆ.

ಈಗಾಗಲೇ ದಕ್ಷಿಣದ ರಾಜ್ಯಗಳಲ್ಲಿ ಫಲವತ್ತತೆ ದರವು 1.6 ಕ್ಕೆ ಕುಸಿದಿದೆ, ಇದು ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಕಡಿಮೆಯಾಗಿದೆ. ಫಲವತ್ತತೆ ದರವು ಇಳಿಮುಖವಾಗುತ್ತಿದ್ದರೆ, 2047 ರ ವೇಳೆಗೆ ವೃದ್ಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಮಕ್ಕಳ ಸಂಖ್ಯೆ ಇಳಿಮುಖವಾಗುತ್ತದೆ.

ಚೀನಾ, ಜಪಾನ್​ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿವೆ ಜಪಾನ್, ಚೀನಾ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳು ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದು, ಅಲ್ಲಿನ ನಾಗರಿಕರಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಸಲಹೆ ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.1.6ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡಿದ್ದು, ಇದಲ್ಲದೆ, ಭಾರತದ ಸರಾಸರಿ ಬೆಳವಣಿಗೆ ದರವು 1950 ರ ದಶಕದಲ್ಲಿ 6.2% ರಿಂದ 2021 ರಲ್ಲಿ 2.1% ಕ್ಕೆ ಇಳಿದಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ದಕ್ಷಿಣ ರಾಜ್ಯಗಳಲ್ಲಿ ಫಲವತ್ತತೆ ದರಗಳು – ಆಂಧ್ರ ಪ್ರದೇಶ: 1.70 – ಕರ್ನಾಟಕ: 1.70 – ಕೇರಳ: 1.80 – ತಮಿಳುನಾಡು: 1.80 – ತೆಲಂಗಾಣ: 1.82

ಭಾರತದ TFR 1950 ರಲ್ಲಿ ಪ್ರತಿ ಮಹಿಳೆಗೆ 6.18 ಮಕ್ಕಳಿಂದ 2021 ರಲ್ಲಿ 1.91 ಕ್ಕೆ ಗಮನಾರ್ಹವಾಗಿ ಕಡಿಮೆಯಾಗಿದೆ. 2050 ರ ವೇಳೆಗೆ 1.29 ಕ್ಕೆ ಮತ್ತು 2100 ರ ವೇಳೆಗೆ 1.04 ಕ್ಕೆ ಇಳಿಯುವ ನಿರೀಕ್ಷೆಯಿದೆ. ಇದು ಕುಗ್ಗುತ್ತಿರುವ ಜನಸಂಖ್ಯೆಗೆ ಕಾರಣವಾಗಬಹುದು.

ಇನ್ನು ಹೆಚ್ಚು ಮಕ್ಕಳಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು ಈ ಹಿಂದೆಯೇ ಮಾಡಿದ್ದೆವು ಎಂದು ಚಂದ್ರಬಾಬು ನಾಯ್ಡು ಹೇಳಿದರು. ಆದರೆ ಈಗ ನಾವು ಆ ಕಾನೂನನ್ನು ರದ್ದುಪಡಿಸುತ್ತಿದ್ದೇವೆ, ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ.

Leave A Reply

Your email address will not be published.