SSLC results: ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಪ್ರದೀಪ್‌ ಈಶ್ವರ್‌ ಹೊಸ ಅಸ್ತ್ರ

SSLC results: ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಪ್ರೌಢಶಾಲಾ ಶಿಕ್ಷಕರ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ (SSLC results) ಪಡಿಸಲು ಹೊಸ ಮಾಸ್ಟರ್‌ ಪ್ಲಾನ್‌ ರೂಪಿಸಿರುವುದಾಗಿ ವಿವರಿಸಿದ್ದಾರೆ.

ಈಗಾಗಲೇ ಎಸ್ಸೆಸ್ಸೆಲ್ಸಿ ಸರಣಿ ಟೆಸ್ಟ್ 2023- 24 ಎಂಬ ಹೆಸರಿನಲ್ಲಿ ಪ್ರಶ್ನೆ ಪತ್ರಿಕೆ ತಯಾರಾಗುತಿದ್ದು, ಈ ಸರಣಿ ಟೆಸ್ಟ್‌ನಿಂದ ವಿದ್ಯಾರ್ಥಿಗಳು ಪ್ರತಿದಿನ ತಾವು ಮರೆತಿರುವ ವಿಷುಯಗಳ ನೆನಪು ಮಾಡಿಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗೆ ಉತ್ತಮ ಸಿದ್ಧತೆ ನಡೆಸಲು ಸಹಾಯವಾಗುತ್ತದೆ.

ಮುಖ್ಯವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಗೆ ಅನ್ವಯವಾಗುವಂತೆ ತಯಾರಾಗುವ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಅಂದಾಜು 16 ಲಕ್ಷ ರು.ಗಳವರೆಗೂ ಖರ್ಚಾಗಬಹುದು. ಈ ಅನುಕೂಲು ಕ್ಷೇತ್ರದ 24 ಪ್ರೌಢಶಾಲೆಗಳ ಸುಮಾರು 4000 ಮಕ್ಕಳಿಗೆ ಸಿಗುತ್ತಿದ್ದು, ಪರೀಕ್ಷೆ ನಡೆಯುವ ಎಲ್ಲಾ ಶಾಲೆಗಳಿಗೂ ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗುವುದು. ಮತ್ತು ನವೆಂಬರ್ 4 ರಿಂದ ಪ್ರತಿದಿನ ನಡೆಯುವ 48 ಟೆಸ್ಟ್ ಗಳು ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮುಗಿಯಲಿವೆ ಎಂದಿದ್ದಾರೆ.

Leave A Reply

Your email address will not be published.