Packet Milk: ಪ್ಯಾಕೆಟ್ ಹಾಲನ್ನು ಬಿಸಿ ಮಾಡಿ, ಕುದಿಸಿ ಕುಡಿಯುತ್ತೀರಾ? ಇದು ತಪ್ಪೋ, ಸರಿಯೋ? ಮಿಸ್ ಮಾಡ್ದೆ ಈ ಸ್ಟೋರಿ ನೋಡಿ

Packet Milk: ಇಂದು ದೇಶಾದ್ಯಂತ ಹೆಚ್ಚಿನ ಕುಟುಂಬಗಳು, ಜನರು ಬಳಸುವುದು ಪ್ಯಾಕೇಟ್ ಹಾಲನ್ನೇ. ಕೆಲವೆಡ ಹಳ್ಳಿಗಳಿಗೂ ಪ್ಯಾಕೇಟ್ ಹಾಲು ಕಾಲಿಟ್ಟಿಗೆ. ನಗರಗಳಲ್ಲಿ ಇದರದ್ದೇ ಹಾವಳಿ. ಆದರೆ ಪ್ಯಾಕೆಟ್ ಹಾಲನ್ನು(Packet Milk) ಖರೀದಿಸುವ ನೀವು ಅದನ್ನು ಬಿಸಿ ಮಾಡಿ, ಕುದಿಸಿ ಕುಡಿಯುತ್ತೀರಾ? ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ.

ಹೌದು, ಅಂಗಡಿಗಳಲ್ಲಿ ಸಿದ್ಧವಾಗಿ ಸಿಗುವ ಪ್ಯಾಕೆಟ್‌ ಹಾಲನ್ನು ಮನೆಗೆ ತಂದು ಕುದಿಸಲಾಗುತ್ತದೆ. ಆದರೆ ಮೊದಲೇ ಶುದ್ಧೀಕರಿಸಿ ಪ್ಯಾಕೆಟ್‌ನಲ್ಲಿ ತುಂಬುವ ಹಾಲನ್ನು ಮತ್ತೆ ಕುದಿಸೋ ಅಗತ್ಯವಿದೆಯಾ. ವರ್ಷಗಳಿಂದ ಭಾರತೀಯರು ಅನುಸರಿಸುತ್ತಿರುವ ಈ ವಿಧಾನನೇ ತಪ್ಪಾ? ಈ ಬಗ್ಗೆ ಇಲ್ಲಿದೆ ಹೆಚ್ಚಿನ ಡೀಟೇಲ್ಸ್.

ಬಹುತೇಕರು ಪ್ಯಾಕೆಟ್‌ನಲ್ಲಿ ಬರುವ ಹಾಲನ್ನು ಕುದಿಸುತ್ತಾರೆ. ಇದು ಆಹಾರದ ಸುರಕ್ಷತೆ (Safe) ಮತ್ತು ಸುವಾಸನೆ ಎರಡನ್ನೂ ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ಆದರೆ ಪ್ಯಾಕೆಟ್ ಹಾಲನ್ನು ಮೊದಲೇ ಕುದಿಸಿ ಮತ್ತೆ ಪ್ಯಾಕ್ ಮಾಡಲಾಗಿರುತ್ತದೆ. ಈ ಪ್ರಕ್ರಿಯೆಯು ಹಾಲನ್ನು ನಿರ್ದಿಷ್ಟ ಸಮಯದವರೆಗೆ ನಿರ್ದಿಷ್ಟ ತಾಪಮಾನಕ್ಕೆ ಬಿಸಿಮಾಡುವುದನ್ನು ಒಳಗೊಂಡಿರುತ್ತದೆ.

ಇದು ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಮತ್ತು ಇ.ಕೋಲಿಯಂತಹ ಹಾನಿಕಾರಕ ರೋಗಕಾರಕಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಪ್ಯಾಕೆಟ್ ಹಾಲಿಗೆ, UHT (ಅಲ್ಟ್ರಾ ಹೈ ಟೆಂಪರೇಚರ್) ಹಾಲು ಎಂದೂ ಸಹ ಉಲ್ಲೇಖಿಸಲಾಗುತ್ತದೆ. ಇದನ್ನು ಕೆಲವೇ ಸೆಕೆಂಡುಗಳ ಕಾಲ ಸುಮಾರು 135 ° C ಗೆ ಬಿಸಿಮಾಡಲಾಗುತ್ತದೆ, ಇದು ಶೈತ್ಯೀಕರಣವಿಲ್ಲದೆ ತಿಂಗಳುಗಳವರೆಗೆ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇದರರ್ಥ ನೀವು ಪ್ಯಾಕ್‌ನಿಂದ ನೇರವಾಗಿ ಪ್ಯಾಕೆಟ್ ಹಾಲನ್ನು ಸುರಕ್ಷಿತವಾಗಿ ಕುಡಿಯಬಹುದು.

ಪ್ಯಾಕೆಟ್‌ ಹಾಲನ್ನು ಕುದಿಸಿದರೆ ಏನಾಗುತ್ತದೆ?
ಪ್ಯಾಕೆಟ್ ಹಾಲಿನ ಪೌಷ್ಟಿಕಾಂಶದ ಮೌಲ್ಯಕ್ಕೆ ಬಂದಾಗ, ಕುದಿಯುವಿಕೆಯು ಕೆಲವು ಜೀವಸತ್ವಗಳ ನಷ್ಟಕ್ಕೆ ಕಾರಣವಾಗಬಹುದು, ವಿಶೇಷವಾಗಿ ಸೂಕ್ಷ್ಮ B ಜೀವಸತ್ವಗಳು ಹಾಲಿನ ಕುದಿಸುವಿಕೆಯಿಂದ ಇಲ್ಲವಾಗಬಹುದು. ಈ ನಷ್ಟವು ಸಾಮಾನ್ಯವಾಗಿ ದೊಡ್ಡದಲ್ಲದಿದ್ದರೂ, ಹಾಲನ್ನು ಆಗಾಗ ಕುದಿಸಿದರೆ, ಅದರ ಪೌಷ್ಟಿಕಾಂಶದ ಪ್ರಯೋಜನಗಳು ಕಡಿಮೆಯಾಗುತ್ತಾ ಹೋಗಬಹುದು. ಮುಖ್ಯವಾಗಿ ಅದರ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಾಗಿ ನೀವು ಹಾಲನ್ನು ಕುಡಿಯುತ್ತಿದ್ದರೆ, ಅದನ್ನು ಕುದಿಸುವ ಅಗತ್ಯವಿರುವುದಿಲ್ಲ.

ಆದರೆ ಜೊತೆಗೆ, ಪ್ರಪಂಚದಾದ್ಯಂತದ ಬಹಳಷ್ಟು ಜನರು ಪ್ಯಾಕೆಟ್ ಹಾಲನ್ನು ಕುದಿಸದೆಯೇ ಆನಂದಿಸುತ್ತಾರೆ. ವಿಶೇಷವಾಗಿ ಬಿಡುವಿಲ್ಲದ ಜೀವನಶೈಲಿಯನ್ನು ಹೊಂದಿರುವವರಿಗೆ ಪ್ಯಾಕ್‌ನಿಂದ ನೇರವಾಗಿ ಹಾಲನ್ನು ಕುಡಿಯುವುದು ಸುಲಭವಾಗಿದೆ.

Leave A Reply

Your email address will not be published.