Nonavinakere Swamiji: ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಚಾರ- ಡಿಕೆಶಿ ಭಯ, ಭಕ್ತಿಯಿಂದ ನಡೆದುಕೊಳ್ಳುವ ನೊಣವಿನಕೆರೆ ಸ್ವಾಮೀಜಿಗಳಿಂದಲೇ ಸ್ಪೋಟಕ ಭವಿಷ್ಯ !!

Share the Article

Noanvinakere Swamiji: ರಾಜ್ಯದಲ್ಲಿ ಸಿಎಂ ಸೀಟ್ ವಿಚಾರ ಭಾರೀ ಚರ್ಚೆಯಲ್ಲಿದೆ. ಡಿ ಕೆ ಶಿವಕುಮಾರ್ ಅಂತೂ ಈ ಸೀಟ್ ಮೇಲೆ ದೊಡ್ಡ ಕಣ್ಣನ್ನೇ ಇಟ್ಟಿದ್ದಾರೆ. ಈ ನಡುವೆಯೇ ಡಿಕೆಶಿ ಅವರ ತುಂಬಾ ಇಷ್ಟದ, ಹತ್ತಿರದ ಸ್ವಾಮಿಗಳಾಗಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಜೀ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೌದು, ಗದಗ(Gadaga) ಜಿಲ್ಲೆಯ ಜಿಲ್ಲೆಯ ಲಕ್ಷ್ಮೇಶ್ವರದ ಮುಕ್ತಿ ಮಂದಿರದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸ್ವಾಮಿಗಳು ‘ಆದಷ್ಟು ಬೇಗ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಮುಖ್ಯಮಂತ್ರಿ ಆಗಲಿದ್ದಾರೆ. ಅವರನ್ನು ಸಿಎಂ ಮಾಡಿ ಈ ಮುಕ್ತಿಮಂದಿರ ಜಾಗಕ್ಕೆ ಕರೆದುಕೊಂಡು ಬಂದು ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿದರು ಎಂದು ನಾಡಿಗೆ ತೋರಿಸೋಣ’ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಮುಡಾ ಹಗರಣದಲ್ಲಿ ಸಿಎಂ ಬದಲಾವಣೆ ತೀವ್ರ ಚರ್ಚೆ ಸಂದಿಗ್ಧ ಸಂದರ್ಭದಲ್ಲಿ ಸ್ವಾಮಿಜಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಷಯ ಸಿಎಂ ಸಿದ್ದರಾಮಯ್ಯ (CM Siddaramaiah) ಬಣದವರ ಆಕ್ರೋಶಕ್ಕೆ ಕಾರಣವಾದ್ರೆ, ಡಿಕೆಶಿ ಬಣದವರಿಗೆ ಸಾಕಷ್ಟು ಚರ್ಚೆಗೆ ಕಾರಣವಾದಂತಿದೆ.

Leave A Reply