Bigg Boss: ಲಾಯರ್ ಜಗದೀಶ್ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಾರಾ ? ಕಿಚ್ಚ ಹೇಳಿದ್ದೇನು?

Bigg Boss : ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್(Lawyer Jagadish) ಅನ್ನು ಹೊರ ಹಾಕಲಾಗಿದೆ. ಜಗದೀಶ್, ಮನೆಯೊಳಗೆ ಬಳಸಿದ ಭಾಷೆ, ನಡೆದುಕೊಂಡ ರೀತಿ, ತೋರಿದ ನಡವಳಿಕೆಗಳಿಂದಾಗಿ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಜಗದೀಶ್ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್ ಸಹ ಹೊರಗೆ ಹೋಗಿದ್ದಾರೆ. ಈ ವಿಚಾರವಾಗಿ ಎಲ್ಲರ ತಪ್ಪನ್ನು ತೋರಿಸಿ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಲಾಯರ್ ಜಗದೀಶ್ ಮತ್ತೆ ಮನೆಗೆ ಎಂಟ್ರಿಕೊಡುತ್ತಾರಾ? ಎಂಬ ಗುಮಾನಿ ಮೂಡಿದೆ. ವೈರಲ್ ಆದ ಪ್ರೋಮೋಗಳು ಇದಕ್ಕೆ ಇಂಬುನೀಡುತ್ತವೆ. ಆದರೆ ಈ ಬಗ್ಗೆ ಕಿಚ್ಚ(Kiccha Sudeep) ಹೊಸ ಸ್ಪಷ್ಟೀಕರಣ ನೀಡಿದ್ದಾರೆ.

 

ಹೌದು, ಲಾಯರ್ ಜಗದೀಶ್ ಅವರ ವರ್ತನೆಯಿಂದ ಬೇಸತ್ತು ಬಿಗ್​ಬಾಸ್​ನಿಂದ ಎಲಿಮಿನೇಟ್ ಮಾಡಲಾಗಿದೆ. ಆದರೆ ಶನಿವಾರ ಸುದೀಪ್ ಅವರು ಜಗದೀಶ್ ಪರವಾಗಿ ಮಾತನಾಡಿದ್ದರು. ಇದೀಗ ಬಿಗ್​ಬಾಸ್​ ಹೊಸ ಪ್ರೋಮೋ ಪ್ರಕಾರ, ಬಿಗ್​ಬಾಸ್ ವೇದಿಕೆ ಮೇಲೆ ಜಗದೀಶ್​ ಅವರ ವಿಡಿಯೋ ಪ್ರಸಾರ ಮಾಡಲಾಗಿದ್ದು, ಜಗದೀಶ್ ಬಿಗ್​ಬಾಸ್​ ಕ್ಷಮೆ ಕೇಳಿರುವುದಲ್ಲದೆ, ತಮ್ಮನ್ನು ಮತ್ತೆ ಬಿಗ್​ಬಾಸ್​ಗೆ ಕರೆಸಿಕೊಳ್ಳಲು ಸಾಧ್ಯವಾ ಎಂದು ಮನವಿ ಮಾಡಿದ್ದಾರೆ. ಆದರೆ ಕಿಚ್ಚನ ಹೇಳಿಕೆ ಬೇರೆಯೇ ಇದ್ದು ಜಗದೀಶ್ ಮತ್ತೆ ಮನೆಯೊಳಗೆ ಬರುವುದು ಡೌಟ್ ಎನ್ನಲಾಗಿದೆ.

ನಿನ್ನೆಯ ಪಂಚಾಯ್ತಿಯಲ್ಲಿ ಮಾತನಾಡಿದ್ದ ಕಿಚ್ಚ ನಾನು ಜಗದೀಶ್​ ಅವರನ್ನು ಕ್ಲೀನ್ ಮಾಡಲು ಅಥವಾ ಅವರು ಮಾಡಿದ್ದು ತಪ್ಪಲ್ಲ ಎಂದಲ್ಲ ಹೇಳಲು ಇಲ್ಲಿ ನಿಂತಿಲ್ಲ. ಅವರ ಮಾತಿನ ಮೇಲೆ ನಿಗಾ ಇರಲಿಲ್ಲ. ಈ ಕಾರಣದಿಂದ ಅವರು ಎಲಿಮಿನೇಟ್ ಆದರು. ಇದನ್ನು ಬಿಗ್ ಬಾಸ್ ಸಹಿಸಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದು ಹೋದ ಅಧ್ಯಾಯ’ ಎಂದು ಹೇಳಿದ್ದಾರೆ. ಇದರಿಂದ ಜಗದೀಶ್ ಅವರು ಮರಳಿ ಬರೋದಿಲ್ಲ ಎಂಬುದು ಸ್ಪಷ್ಟವಾಗಿದೆ.

Leave A Reply

Your email address will not be published.