Chitradurga: ಅಡಿಕೆ ತೋಟಕ್ಕೆ ಕಳ್ಳತನಕ್ಕೆ ಬಂದ ಇಬ್ಬರು ಕಳ್ಳರು ಕರೆಂಟ್ ಶಾಕ್ ಹೊಡೆದು ತೋಟದಲ್ಲೇ ನಿಗೂಢ ಸಾವು !!

Chitradurga: ಅಡಿಕೆ ತೋಟಕ್ಕೆ ಕಳ್ಳತನಕ್ಕೆಂದು ಬಂದಿದ್ದ ಇಬ್ಬರು ಕಳ್ಳರು ಕರೆಂಟ್ ಶಾಕ್ ಹೊಡೆದು ಅಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಮಧ್ಯಪ್ರದೇಶ(MP) ಮೂಲದ ಇಬ್ಬರು ಕಳ್ಳರು ಅಡಿಕೆ ತೋಟದಲ್ಲಿದ್ದ ಶ್ರೀಗಂಧದ ಮರಗಳ ಕಳ್ಳತನಕ್ಕೆ ಯತ್ನಿಸುವಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ(Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಣಜನಹಳ್ಳಿ ಬಳಿ ಈ ಘಟನೆ ನಡೆದಿದೆ.
ಮೃತರನ್ನು ಮಧ್ಯಪ್ರದೇಶ ಮೂಲದ ಮೋಹಿತ್ (24), ಕತರ್ವ ( 38) ವರ್ಷ ಎಂದು ಗುರುತಿಸಲಾಗಿದೆ. ಹಿರಿಯೂರು ತಾಲ್ಲೂಕಿನ ಧರ್ಮಪುರದ ಕಣಜನಹಳ್ಳಿ ರಸ್ತೆಯ ಕೃಷ್ಣಾಪುರ ಜಯರಾಂ ಎಂಬುವರ ಅಡಿಕೆ ತೋಟದಲ್ಲಿ ಗಂಧದ ಮರಗಳ ಕಳ್ಳತನಕ್ಕೆ ಮುಂದಾದಾಗ ಘಟನೆ ನಡೆದಿದೆ.
ಇನ್ನೂ ಇವರು ಶ್ರೀಗಂಧ ಮರ ಕಳ್ಳತನ ಮಾಡಲು ರಾತ್ರಿ ಹೋಗಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಜಯರಾಂ ಎಂಬುವರ ಅಡಿಕೆ ತೋಟದಲ್ಲಿ ಕೆಲವು ಶ್ರೀಗಂಧ ಮರಗಳಿದ್ದವು. ಅವುಗಳನ್ನು ಕಳ್ಳತನ ಮಾಡಲು ಹೋದಾಗ ಮೋಟಾರ್ ಪಂಪ್ ಬಳಿ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಲ್ಲದೆ ಮೃತರು ಧರ್ಮಪುರದ ಕಣಜನಹಳ್ಳಿ ರಸ್ತೆಯ ಸ್ವಾಭಿಮಾನ ಶಾಲೆ ಬಳಿ ಟೆಂಟ್ ಹಾಕಿಕೊಂಡು ವಾಸವಿದ್ದರು ಎನ್ನಲಾಗಿದೆ. ಇವರು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತರ ಸ್ಥಳದಲ್ಲಿ ಕೊಡಲಿ ಹಾಗೂ ಗರಗಸ ಪತ್ತೆಯಾಗಿವೆ ಎನ್ನಲಾಗುತ್ತಿದೆ.