Bigg Boss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾಯಕ ಹನುಮಂತು – ಮನೆಗೆ ಬರುತ್ತಿದ್ದಂತೆ ಸಿಕ್ತು ಮಹತ್ವದ ಜವಾಬ್ದಾರಿ !!

Share the Article

Bigg Boss Kannada- 11ರಿಂದ ಲಾಯರ್ ಜಗದೀಶ್ ಅನ್ನು ಹೊರ ಹಾಕಲಾಗಿದೆ. ಜಗದೀಶ್, ಮನೆಯೊಳಗೆ ಬಳಸಿದ ಭಾಷೆ, ನಡೆದುಕೊಂಡ ರೀತಿ, ತೋರಿದ ನಡವಳಿಕೆಗಳಿಂದಾಗಿ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಜಗದೀಶ್ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್ ಸಹ ಹೊರಗೆ ಹೋಗಿದ್ದಾರೆ. ಈ ವಿಚಾರವಾಗಿ ಎಲ್ಲರ ತಪ್ಪನ್ನು ತೋರಿಸಿ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಂದೂ ಕೂಡ ಕಿಚ್ಚನ ಪಂಚಾಯ್ತಿ ಮುಂದುವರೆಯಲಿದ್ದು ಹಲವರಿಗೆ ಹಬ್ಬ ಕಾದಿದೆ.

ಈ ಬೆನ್ನಲ್ಲೇ ಲಾಯರ್ ಜಗದೀಶ್ ಹಾಗೂ ರಂಜಿತ್ ಮತ್ತೆ ಮನೆಗೆ ಎಂಟ್ರಿಕೊಡುತ್ತಾರಾ? ಎಂಬ ಗುಮಾನಿ ಮೂಡಿದೆ. ವೈರಲ್ ಆದ ಪ್ರೋಮೋಗಳು ಇದಕ್ಕೆ ಇಂಬುನೀಡುತ್ತವೆ. ಆದರೆ ಅಚ್ಚರಿ ಎಂಬಂತೆ ಈ ನಡುವೆಯೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸಂಗೀತಗಾರ, ಹಾಸ್ಯಗಾರ ಕನ್ನಡಿಗರ ಮನ ಗೆದ್ದ ಹನುಮಂತು( Hanumantu) ಎಂಟ್ರಿಕೊಟ್ಟಿದ್ದಾರೆ !!

ಹೌದು, ಇಂದು ಬೆಳಿಗ್ಗೆ ಬಿಗ್ ಬಾಸ್ ಹಂಚಿಕೊಂಡಿರೋ ಪ್ರೋಮೋದಲ್ಲಿ ಮನೆಯ ಮುಖ್ಯ ದ್ವಾರ ಓಪನ್ ಆಗಿದ್ದು, ಅದರಿಂದ ಹನುಮಂತು ಕುಣಿಯುತ್ತಾ, ಸ್ಟೆಪ್ ಹಾಕುತ್ತಾ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮನೆ ಮಂದಿ ಎಲ್ಲರೂ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಅಲ್ಲದೆ ಪ್ರೀತಿಯಿಂದ ಉಣಬಡಿಸಿದ್ದಾರೆ. ಹನುಮಂತು ಮನೆಗೆ ಎಂಟ್ರಿ ಆಗುತ್ತಿದ್ದಂತೆ ತಮ್ಮ ನ್ಯಾಚುರಲ್ ಮಾತುಗಳಿಂದ ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

ಇಷ್ಟೇ ಅಲ್ಲದೆ ಮನೆಗೆ ಬಂದ ಹೊಸ ಅತಿಥಿ ಹನುಮಂತುಗೆ ಬಿಗ್ ಬಾಸ್ ಮಹತ್ವದ ಜವಾಬ್ದಾರಿ ನೀಡಿದ್ದು ಅವರನ್ನೇ ಕ್ಯಾಪ್ಟನ್ ಆಗಿ ನೇಮಿಸಿದೆ. ಒಟ್ಟಿನಲ್ಲಿ ಈ ಪ್ರೋಮೋ ಸಖತ್ ವೈರಲ್ ಆಗಿದೆ.

Leave A Reply