Anchor Anushri: ಆಂಕರ್ ಅನುಶ್ರೀ ಮದುವೆ ಫಿಕ್ಸ್! ಮಾರ್ಚ್ ನಲ್ಲಿ ಮದುವೆ ಊಟ ಗ್ಯಾರಂಟಿ!

Anchor Anushri: ಮಾತಿನ ಮಳ್ಳಿ, ಕನ್ನಡ ನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಎಲ್ಲರಿಗೂ ಒಂದು ರೀತಿಯ ಕುತೂಹಲ ಇದ್ದೇ ಇದೆ. ಅಂತೆಯೇ ಅನುಶ್ರೀ (Anchor Anushri) ಮದುವೆ ಬಗ್ಗೆ ಹೊಸ ಅಪ್ಡೇಟ್ ನ್ಯೂಸ್ ಇಲ್ಲಿದೆ ನೋಡಿ.

 

ಮದುವೆ, ಸಂಸಾರದ ಬಗ್ಗೆ ಮಾತನಾಡಿದ್ರೆ ಆಸಕ್ತಿ ತೋರಿಸದ ಅನುಶ್ರೀ ಇತ್ತೀಚಿನ ದಿನಗಳಲ್ಲಿ ಅನುಶ್ರೀ ಮದುವೆಯಾಗಲು ಗ್ರೀನ್‌ ಸಿಗ್ನಲ್‌ ನೀಡುತ್ತಿದ್ದು, ದಾಂಪತ್ಯ ಜೀವನದತ್ತ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಇತ್ತೀಚಿನ ಕೆಲವು ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಇದೀಗ ಮುಂದಿನ ವರ್ಷ ನಿರೂಪಕಿ ಅನುಶ್ರೀ ಮದುವೆಯಾಗುವುದು ಖಚಿತವಾಗಿದ್ದು, ದಿನಾಂಕ ಕೂಡ ಬಹುತೇಕ ನಿಗದಿಯಾಗಿದೆ.

ಇದು ಅನುಶ್ರೀ ಮದುವೆ ಬಗ್ಗೆ ಯಾರೋ ಏನೋ ನೀಡಿರುವ ಹೇಳಿಕೆಯಲ್ಲ ಸ್ವತಃ ಅನುಶ್ರೀಯೇ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಒಂದು ಸಿಕ್ರೇಟ್‌ಅನ್ನು ಬಹಿರಂಗ ಪಡಿಸಿದ್ದಾರೆ. ಮುಖ್ಯವಾಗಿ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್‌ ಚಾನೆಲ್‌ಗೆ ಅತಿಥಿಗಳನ್ನಾಗಿ ಕರೆದು ಚಿಟ್‌ ಚಾಟ್‌ ನಡೆಸಿದ್ದರು. ಈ ವೇಳೆ ಮದುವೆ ವಿಚಾರ ಬಂದಾಗ ಉತ್ತರಿಸಿದ ನಟ ಗಿಲ್ಲಿ, ನಾವು ಬೇರೆ ಬೇರೆ ಕುಳಿದಿದ್ದೇವೆ. ಮಧ್ಯದಲ್ಲಿ ಕುಳಿತ ನೀವೂ ಮದುವೆಗೆ ರೆಡಿ ಆಗಿದ್ದೀರಾ ಅನು ಅಕ್ಕ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅನುಶ್ರೀ ಫಿಕ್ಸ್ ಆಗ್ತಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ವರ್ಷ ಮದುವೆ ಊಟ ಹಾಕಿಸುವುದು ಗ್ಯಾರಂಟಿ ಎನ್ನುವ ಸುಳಿವು ನೀಡಿದ್ದಾರೆ.

ಈ ಮಾತುಕತೆ ಮುಂದುವರಿದಿದ್ದು, ಅಲ್ಲೇ ಇದ್ದ ಸೂರಜ್ ಬಹುಶಃ ಮುಂದಿನ ಫೆಬ್ರವರಿಗೆ ಅನುಶ್ರೀ ಅವರ ಮದುವೆ ಇರಬಹುದು ಎಂದಿದ್ದಾರೆ. ಆಗ ಇಲ್ಲ ಕಣ್ರೋ ನಾನು ಅಪ್ಪು ಸರ್ ಫ್ಯಾನ್ ಆಗಿರೋದ್ರಿಂದ ಮಾರ್ಚ್‌ನಲ್ಲಿ ಎಂದು ಅನುಶ್ರೀ ರಾಗ ಎಳೆದಿದ್ದಾರೆ. ಹೀಗಾಗಿ ಮಾರ್ಚ್ 17ರಂದು ಪುನೀತ್​ ರಾಜ್​ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಅನುಶ್ರೀ ಮದುವೆಯಾಗುವ ಸಾಧ್ಯತೆ ಇದೆ. ಅಥವಾ ಮಾರ್ಚ್ 17 ಪುನೀತ್​ ರಾಜ್​ಕುಮಾರ್ ಅವರ ಹುಟ್ಟುಹಬ್ಬದ ದಿನ ಮದುವೆ ದಿನಾಂಕ ಘೋಷಣೆ ಹಾಗೂ ಹುಡುಗನ್ನು ಅನುಶ್ರೀ ಪರಿಚಯ ಮಾಡಿಕೊಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

Leave A Reply

Your email address will not be published.