Actor Sudeep: ನಟ ಸುದೀಪ್‌ ತಾಯಿ ಇನ್ನಿಲ್ಲ

Actor Sudeep: ನಟ ಸುದೀಪ್‌ ಅವರ ತಾಯಿ ಸರೋಜಾ ಅವರು ನಿಧನ ಹೊಂದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಸುದೀಪ್‌ ಅವರ ತಾಯಿ ಮೃತ ಹೊಂದಿದ್ದಾರೆ.

 

ಸುದೀಪ್‌ ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್‌ ಅವರ ಜೆಪಿ ನಗರ ನಿವಾಸಕ್ಕೆ ಕರೆತರಲಾಗುವುದು, ಮತ್ತು ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಸರೋಜಾ ಅವರನ್ನು ದಾಖಲು ಮಾಡಲಾಗಿತ್ತು. ಇಂದು (ಅ.20) ಬೆಳಿಗ್ಗೆ 7.04 ರ ಸುಮಾರಿಗೆ ಸುದೀಪ್‌ ತಾಯಿ ಮೃತ ಹೊಂದಿದ್ದಾರೆ. ತಾಯಿ ಅನಾರೋಗ್ಯವಿದ್ದ ಕಾರಣ ನಿನ್ನೆ ಬಿಗ್‌ಬಾಸ್‌ ಶೂಟಿಂಗ್‌ ಬೇಗನೇ ಮುಗಿಸಿ ಸುದೀಪ್‌ ಸೆಟ್‌ನಿಂದ ಹೋಗಿದ್ದರು ಎನ್ನಲಾಗಿದೆ.

ಸುದೀಪ್‌ ತಾಯಿ ಮಂಗಳೂರು ಮೂಲದವರು. ಈ ಕುರಿತು ವಿಕ್ರಾಂತ್‌ ರೋಣ ಸಮಯದಲ್ಲಿ ಈ ಕುರಿತು ಉಲ್ಲೇಖ ಮಾಡಿದ್ದರು. ನನ್ನ ತಾಯಿ ಮಂಗಳೂರು ಮೂಲದವರು, ಅವರ ಮಾತೃಭಾಷೆ ತುಳು, ನನಗೆ ಆ ಭಾಷೆ ತುಂಬಾ ಇಷ್ಟ. ನಾನು ಸಾಕಷ್ಟು ಕೇಳಿಸಿಕೊಂಡಿದ್ದೇನೆ. ಆದರೆ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದರು.

Leave A Reply

Your email address will not be published.