National Park: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳು: ಪ್ರವಾಸಿಗರಿಗೆ ಅಳಿವಿನಂಚಿನ ಪ್ರಾಣಿಗಳನ್ನು ನೋಡುವ ಅವಕಾಶ

National Park: ಬೆಂಗಳೂರು(Bengaluru) ಹೊರವಲಯದ ಬನ್ನೇರುಘಟ್ಟ(banneruGhatta) ರಾಷ್ಟ್ರೀಯ ಉದ್ಯಾನವನಕ್ಕೆ ಎರಡು ಹೊಸ ಅತಿಥಿಗಳ ಆಗಮನವಾಗಿದೆ. ಅಳಿವಿನಂಚಿನಲ್ಲಿರುವ(Endangered Species) ಘಾರಿಯಲ್ಸ್ ಪ್ರಭೇದದ ಎರಡು ಮೊಸಳೆಗಳು(Crocodile) ಹಾಗೂ ಬಿಳಿ ಹುಲಿ(White Tiger) ಮತ್ತು ಜಂಗಲ್ ಕ್ಯಾಟ್(Jungle Cat) ಎಂಟ್ರಿ ಕೊಟ್ಟಿದೆ. ವಿನಿಮಯ ಕಾರ್ಯಕ್ರಮದಡಿ ಈ ಪ್ರಾಣಿಗಳನ್ನು ತರಲಾಗಿದೆ.

ಬಿಹಾರದ ಪಾಟ್ನಾ ಸಂಜಯ್ ಗಾಂಧಿ ಬಯೋಲಾಜಿಕಲ್ ಪಾರ್ಕ್ ನಿಂದ ತರಲಾಗಿದ್ದು, ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯಂತೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈವಿಧ್ಯತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಒಂದು ಗಂಡು ಜೀಬ್ರಾ ಮತ್ತು ಎರಡು ಗಂಡು ಥಮಿನ್ ಜಿಂಕೆಗಳನ್ನು ಪಾಟ್ನಾ ಮೃಗಾಲಯಕ್ಕೆ ನೀಡಿ, ಪ್ರತಿಯಾಗಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಘಾರಿಯಲ್ಸ್, ಬಿಳಿ ಹುಲಿ ಮತ್ತು ಜಂಗಲ್ ಕ್ಯಾಟ್ ಅನ್ನು ಸ್ವೀಕಾರ ಮಾಡಲಾಗಿದೆ.

ಸದ್ಯ ಕೆಲವು ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಈ ಪ್ರಾಣಿಗಳನ್ನುಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.