Indigestion: ಹುಳಿ ತೇಗು, ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ? ಪರಿಹಾರ ಪಡೆಯಲು ಇಲ್ಲಿದೆ ಸುಲಭ ಮನೆಮದ್ದು
Indigestion: ಕೆಲವೊಮ್ಮೆ ಅಜೀರ್ಣವು ಹೊಟ್ಟೆ ಭಾರ ಮತ್ತು ನೋವನ್ನು(Stomach pain) ಉಂಟುಮಾಡುತ್ತದೆ. ಚಡಪಡಿಕೆ, ಉರಿತದ ಸಂವೇದನೆ ಮತ್ತು ವಾಕರಿಕೆ(vomiting) ಸಹ ಅನುಭವಿಸಲಾಗುತ್ತದೆ. ಕೆಲವರಿಗೆ ಹುಳಿ ತೇಗು ಮತ್ತು ವಾಂತಿ ಸಮಸ್ಯೆಯೂ ಇರುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗೆ ಅನೇಕ ಔಷಧಿಗಳನ್ನು(Medicine) ತೆಗೆದುಕೊಳ್ಳುವುದು ಸಹಾಯ ಮಾಡದಿದ್ದರೆ, ಕೆಲವು ಸಾಂಪ್ರದಾಯಿಕ ಪರಿಹಾರಗಳನ್ನು ಪ್ರಯತ್ನಿಸಿ, ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಈ ಪರಿಹಾರವನ್ನು ಮಾಡಿ
▪ ನಿಂಬೆ ಹೋಳಿನ ಮೇಲೆ ಕಪ್ಪು ಉಪ್ಪು, ಕರಿಮೆಣಸು ಪುಡಿ ಮತ್ತು ಜೀರಿಗೆ ಪುಡಿ ಹಾಕಿ ತಿನ್ನಿ.
▪ ಪುದೀನಾ ಎಲೆಗಳನ್ನು ಕುದಿಸಿ ಆ ನೀರನ್ನು ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ.
▪ ಪ್ರತಿನಿತ್ಯ ಅರ್ಧ ಕಪ್ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ.
▪ ಬೆಚ್ಚಗಿನ ನೀರಿನಲ್ಲಿ ನಿಂಬೆ ಹಣ್ಣನ್ನು ಹಿಂಡಿ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ.
▪ ಹಸಿ ಶುಂಠಿಯನ್ನು ಸಣ್ಣಗೆ ಕತ್ತರಿಸಿ ಬಿಸಿ ನೀರಿಗೆ ಹಾಕಿ ಕುದಿಸಿ. ಈ ನೀರನ್ನು ಸೋಸಿಕೊಂಡು ಕುಡಿಯಿರಿ.
▪ ಈರುಳ್ಳಿ ಮತ್ತು ಕಪ್ಪು ಉಪ್ಪನ್ನು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬಿಸಿ ನೀರಿನಲ್ಲಿ ಕುಡಿಯಿರಿ.
▪ ಮೆಣಸು ಕಾಳು, ಇಂಗು, ಶುಂಠಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಅರ್ಧ ಚಮಚ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ.
▪ ಅರ್ಧ ಚಮಚ ಮೆಂತ್ಯ ಬೀಜಕ್ಕೆ ಉಪ್ಪು ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಬಿಸಿನೀರಿನೊಂದಿಗೆ ಕುಡಿಯಿರಿ.
▪ ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಸೇವಿಸಿದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ.
▪ ಎರಡು ಏಲಕ್ಕಿಯನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವಿಸಿ.
▪ ದಾಳಿಂಬೆ ಕಾಳುಗಳನ್ನು ಮೆಣಸು ಕಾಳು ಮತ್ತು ಉಪ್ಪು ಸೇರಿಸಿ ತಿನ್ನಿ.
• ಡಾ. ಪ್ರ. ಅ. ಕುಲಕರ್ಣಿ