India: 2030ರ ವೇಳೆಗೆ ಭಾರತವೇ ದೊಡ್ಡಣ್ಣ! ಚೀನಾ-ಅಮೆರಿಕವನ್ನೇ ಹಿಂದಿಕ್ಕುತ್ತಾ ಭಾರತ? ವರದಿಯಲ್ಲಿದೆ ಸ್ಫೋಟಕ ಮಾಹಿತಿ

India: ಭಾರತ (India) ದೇಶವು ಪ್ರಾಚೀನ ನಾಗರೀಕತೆಯ ಸಮಯದಿಂದಲೂ ಶ್ರೀಮಂತ ದೇಶ. ಐತಿಹಾಸಿಕವಾಗಿ ಸಮೃದ್ಧವಾದ ದೇಶ. ವಾಣಿಜ್ಯ ಮಾರ್ಗಗಳು ಮತ್ತು ವಿವಿಧ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉದಯಿಸಿದೆ. ಪ್ರಮುಖ ಧರ್ಮಗಳಾದ ಹಿಂದೂ(Hindu), ಬೌದ್ಧ, ಜೈನ ಮತ್ತು ಸಿಖ್ಗಳು ಭಾರತದಲ್ಲೇ ಹುಟ್ಟಿದ್ದು. ಭಾರತ ಬೆಳೆಯುತ್ತಿರುವ ದೇಶ. ಇತ್ತೀಚಗೆಂತೂ ಸೂಪರ್‌ ವೇಗವಾಗಿ ಭಾರತ ವಿಶ್ವದಲ್ಲಿ(World) ಬೆಳೆಯುತ್ತಿದೆ. 2030 ರ ವೇಳೆಗೆ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆ(Global Economic) ಹೊಂದಿದ ದೇಶವಾಗಲಿದೆ ಎಂಬ ವರದಿಯನ್ನು(Report) ರೇಟಿಂಗ್ ಏಜೆನ್ಸಿ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ(Population) ಮೂಲ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹಾಗೂ ಸವಾಲುಗಳನ್ನು ಎದರಿಸಲು ಇದು ಸಹಾಯವಾಗುತ್ತದೆ. ಮತ್ತು ಉತ್ಪಾದಕತೆಯನ್ನು ಉಳಿಸಿಕೊಳ್ಳಲು ಹೂಡಿಕೆಯ ಅಗತ್ಯತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ವರದಿಯುಲ್ಲಿ ಬಹಿರಂಗಗೊಳಿಸಿದೆ.

ಆರ್ಥಿಕತೆ ವಿಷಯದಲ್ಲಿ ಮುಂಚೂಣಿಯತ್ತ ಭಾರತ:
ಪ್ರಸ್ತುತ ಭಾರತ ದೇಶದ್ದು, 3,600 ಬಿಲಿಯನ್ ಡಾಲರ್ ಆರ್ಥಿಕತೆಯಿದೆ. ಅದು 2047 ರ ವೇಳೆಗೆ 30 ಸಾವಿರ ಶತಕೋಟಿ ಡಾಲರ್ ಆರ್ಥಿಕತೆಯಾಗುವ ಗುರಿ ಹೊಂದಿದೆ. ಪ್ರಸ್ತುತ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಹಾಗೆಯೇ ಆರ್ಥಿಕತೆಯ ವಿಷಯಕ್ಕೆ ಬಂದರೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತವಾಗಿದೆ.

ಭವಿಷ್ಯದಲ್ಲಿ ಭಾರತ ಹೇಗಿರುತ್ತೆ?
ಆರ್ಥಿಕತೆ ವಿಚಾರಕ್ಕೆ ಬಂದರೆ ಭಾರತ ಬರುವ 3 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹಾಗೂ 2030 ರ ವೇಳೆಗೆ ಜಾಗತಿಕವಾಗಿ 3ನೇ ಅತಿದೊಡ್ಡ ದೇಶವಾಗಲು ತಯಾರಿಯಲ್ಲಿದೆ. 2024 ರಲ್ಲಿ ಹೂಡಿಕೆ ಬ್ಯಾಂಕಿಂಗ್ ಕಂಪನಿ JP ಮೋರ್ಗಾನ್ ಅವರ ಸರ್ಕಾರಿ ಮಾರುಕಟ್ಟೆಗಳ ಬಾಂಡ್ ಇಂಡೆಕ್ಸ್’ಗೆ ಭಾರತದ ಪ್ರವೇಶಿಸಲಿದೆ. ಇದು ಹೆಚ್ಚುವರಿ ಸರ್ಕಾರಿ ಹಣಕಾಸು ಹಾಗೂ ದೇಶೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಗಮನಾರ್ಹ ಸಂಪನ್ಮೂಲಗಳಿಗೆ ಪ್ರವೇಶಿಸುವ ಅವಕಾಶವನ್ನು ನೀಡುತ್ತದೆ.

ಜಾಗತಿಕ ಆರ್ಥಿಕತೆಯಲ್ಲಿ ಭಾರತ ಪಾತ್ರವೇನು?
ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಮುಂದಿನ ದಶಕದಲ್ಲಿ ಭಾರತದ ಹಲವು ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಎಸ್ & ಪಿ ವರದಿ ಮಾಹಿತಿ ನೀಡಿದೆ. ಇನ್ನು ಡಿಫೈನಿಂಗ್ ದಶಕ ವರದಿಯಲ್ಲಿ, 2035 ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ (GDP) ಸರಾಸರಿ ಬೆಳವಣಿಗೆ ದರವು 4.06 ಪ್ರತಿಶತದಷ್ಟಿದ್ದರೆ, ಮುಂದುವರಿದ ಆರ್ಥಿಕತೆಗಳಿಗೆ ಈ ದರವು 1.59 ಪ್ರತಿಶತದಷ್ಟಿರುತ್ತದೆ ಎಂದು ವರದಿ ಹೇಳುತ್ತಿದೆ.

ಭಾರತಕ್ಕಿಂತ ಹಿಂದೆ ಉಳಿಯುತ್ತಿವೆ ಅನೇಕ ದೇಶಗಳು:
ಭಾರತ ಮಾರುಕಟ್ಟೆಗಳು 2035ರ ವೇಳೆಗೆ ಜಾಗತಿಕ ಆರ್ಥಿಕ ಬೆಳವಣಿಗೆಗೆ ಸುಮಾರು 65 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಎಂದು ವರದಿ ಬಹಿರಂಗಪಡಿಸಿದೆ. ಈ ಬೆಳವಣಿಗೆ ಪ್ರಮುಖವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದ ಆರ್ಥಿಕತೆಗೆ ಕೊಡುಗೆ ನೀಡಲಿದ್ದು, ಇದರಲ್ಲಿ ಚೀನಾ, ಭಾರತ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳು ಸೇರಿವೆ. ಹೆಚ್ಚುವರಿಯಾಗಿ, 2035 ರ ವೇಳೆಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಆದರೆ ಇಂಡೋನೇಷ್ಯಾ ಹಾಗೂ ಬ್ರೆಜಿಲ್ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನವನ್ನು ಪಡೆದುಕೊಳ್ಳಲಿವೆ ಎಂದು ಎಸ್ & ಪಿ ಹೇಳಿದೆ. ಭಾರತ ದೇಶವು ತನ್ನ ಬಂಡವಾಳ ವೆಚ್ಚವನ್ನು ಏರಿಸುವ ಮೂಲಕ ತನ್ನ ದುರ್ಬಲ ಹಣಕಾಸಿನ ಸಮಸ್ಯೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವರದಿ ಮಾಹಿತಿ ನೀಡಿದೆ..

Leave A Reply

Your email address will not be published.