Heart desease: ಹೃದ್ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯುವ ಅಗತ್ಯವಿದೆ? ತಜ್ಞ ವೈದ್ಯರು ಏನು ಹೇಳುತ್ತಾರೆ?

Heart desease: ದೇಹವನ್ನು ಜಲೀಕರಿಸಲು(Hydrate) ಸಾಕಷ್ಟು ನೀರು(Water) ಕುಡಿಯಲು ನಿರಂತರವಾಗಿ ಸಲಹೆ ನೀಡಲಾಗುತ್ತದೆ. ಕೆಲವರು ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ, ಇನ್ನು ಕೆಲವರು ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ.

ಜಲವೇ ಜೀವನ. ನೀರು ಕುಡಿಯದೆ ಆರೋಗ್ಯವಾಗಿ(Health) ಬದುಕುವುದು ಸಾಧ್ಯವಿಲ್ಲ. ಆದರೆ, ಹೃದಯ ಸಂಬಂಧಿ ಕಾಯಿಲೆ ಇರುವವರು ಕಡಿಮೆ ನೀರು ಕುಡಿಯುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ, ದಿನಕ್ಕೆ ಎಷ್ಟು ನೀರು ಕುಡಿಯುವುದು ಹೃದ್ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳೋಣ.

ಆರೋಗ್ಯದ ದೃಷ್ಟಿಯಿಂದ ಕೆಲವು ಹೃದ್ರೋಗಿಗಳು ನೀರು ಸೇರಿದಂತೆ ಇತರ ದ್ರವ ಪದಾರ್ಥಗಳ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಇನ್ನು ಕೆಲ ವೈದ್ಯರ ಪ್ರಕಾರ, ಕೆಲವು ಪರಿಸ್ಥಿತಿಗಳಲ್ಲಿ ಹೃದ್ರೋಗಿಗಳಿಗೆ ಕಡಿಮೆ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ. ಯಾಕೆಂದು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಿ.

ಮೂತ್ರಪಿಂಡದ ಮೇಲೆ ಹೆಚ್ಚಿದ ಒತ್ತಡ:
ಹೃದ್ರೋಗಿಗಳು ಸಾಮಾನ್ಯವಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಎಲೆಕ್ಟ್ರೋಲೈಟ್ಗಳ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಮಟ್ಟ ಏರುಪೇರಾಗುತ್ತದೆ. ಅಲ್ಲದೆ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ, ನೀವು ಅಂತಹ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು.

ಹೃದಯ ಬಡಿತ ಮತ್ತು ಕುಡಿಯುವ ನೀರಿನ ನಡುವಿನ ಸಂಬಂಧ:
ಹೃದಯದ ಪಂಪ್ ಮಾಡುವ ಕಾರ್ಯವು ನೀರಿನ ಸೇವನೆಗೆ ಸಂಬಂಧಿಸಿದೆ. ರೋಗಿಗಳು ಯಾರು ಯಾರ ಹೃದಯವು ಇತರರಿಗಿಂತ ಕಡಿಮೆ ಪಂಪ್ ಮಾಡುತ್ತದೆಯೋ ಅವರು ಸಾಮಾನ್ಯ ನೀರಿನ ಸೇವನೆಯೊಂದಿಗೆ ಪಂಪ್ ಅನ್ನು ನಿರ್ವಹಿಸುವಲ್ಲಿ ತೊಂದರೆ ಹೊಂದಿರಬಹುದು. ಆದರೆ ಕಡಿಮೆ ನೀರು ಕುಡಿಯಬೇಕೆಂಬ ನಿಯಮ ಎಲ್ಲ ಹೃದ್ರೋಗಿಗಳಿಗೂ ಅನ್ವಯವಾಗುವುದಿಲ್ಲ. ಕೆಲವೊಮ್ಮೆ ಹೆಚ್ಚು ನೀರು ಕುಡಿಯುವುದರಿಂದ ನಡೆಯುವಾಗ ಅಥವಾ ನಿದ್ದೆ ಮಾಡುವಾಗ ಉಸಿರಾಟದ ತೊಂದರೆ ಉಂಟಾಗುತ್ತದೆ.

ಎಷ್ಟು ನೀರು ಕುಡಿಯಬೇಕು?
ಹೃದ್ರೋಗ ರೋಗಿಗಳು ದಿನಕ್ಕೆ ಒಂದೂವರೆ ಲೀಟರ್ಗಿಂತ ಹೆಚ್ಚು ನೀರು ಕುಡಿಯಬಾರದು. ಅಲ್ಲದೆ, ಹೃದ್ರೋಗಿಗಳು ಬೇಸಿಗೆಯಲ್ಲಿ 2 ಲೀಟರ್ಗಿಂತ ಹೆಚ್ಚು ನೀರು ಕುಡಿಯಬಾರದು. ಯಾವುದೇ ರೀತಿಯ ದ್ರವವನ್ನು ಸೇವಿಸುವ ಮೊದಲು ಹೃದಯ ರೋಗಿಗಳು ಯಾವಾಗಲೂ ವೈದ್ಯರನ್ನು ಸಂಪರ್ಕಿಸಬೇಕು.

ಹೃದಯ ರೋಗಿಗಳಾಗಲಿ ಅಥವಾ ಆರೋಗ್ಯವಂತರಾಗಲಿ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಾಗ ಇದು ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹೃದಯವು ಅಧಿಕ ನೀರನ್ನು ತಳ್ಳಬೇಕಾಗುತ್ತದೆ. ಆದ್ದರಿಂದ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಹೊರಹಾಕಲು ಹೆಚ್ಚಿನ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ರೀತಿ ಎರಡೂ ಅಂಗಗಳು ಆಯಾಸಗೊಳ್ಳುತ್ತವೆ. ಇದು ದೀರ್ಘಕಾಲ ಮುಂದುವರೆದರೆ ಅವುಗಳ ಕಾರ್ಯ ಕೆಟ್ಟು ಅಂಗ ವೈಫಲ್ಯಗಳು ಉಂಟಾಗಬಹುದು. ಮೊದಲೇ ಹೃದಯ ರೋಗ ಅಥವಾ ಮುತ್ರಪಿಂಡದ ಕಾಯಿಲೆ ಇರುವಾಗ ಹೆಚ್ಚು ನೀರು ಕುಡಿಯುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

Leave A Reply

Your email address will not be published.