Elephant Attack: ಬಂಡೀಪುರ ರಸ್ತೆಯಲ್ಲಿ ಆನೆ ದಾಳಿ: ಎದುರಿಗಿದ್ದ ಬೈಕ್ ಸವಾರ ಏನಾದ?

Elephant Attack: ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶವಾದ(Tiger reserve forest) ಚಾಮರಾಜನಗರನ(Chamarajanagara) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ (Bandipura) ಆನೆ ದಾಳಿಯಿಂದ ಬೈಕ್ ಸವಾರನೊಬ್ಬ(Bike rider) ಕೂದಳೆಲೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಊಟಿ ಕಡೆಯಿಂದ ಮೈಸೂರಿನತ್ತ ಹೆದ್ದಾರಿಯಲ್ಲಿ ಶುಕ್ರವಾರದಂದು ಬರುತ್ತಿದ್ದಾಗ ಬೈಕ್ ಸವಾರನಿಗೆ ಆನೆಗಳು ಎದುರಾಗಿವೆ. ಇನ್ನೇನು ಆತನ ಮೇಲೆ ಆನೆ ದಾಳಿ ಮಾಡಲು ಯತ್ನಿಸುತ್ತಿರುವಾಗ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಜೀವನೇ ಬಾಯಿಗೆ ಬರುವ ಈ ದೃಶ್ಯವನ್ನು ಸಲ್ಲೆ ಕಾರಿನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.
ರಸ್ತೆ ಬದಿಯಲ್ಲಿ ಮರಿ ಜೊತೆ ಎರಡು ಆನೆ ನಿಂತಿದ್ದವು. ಅವುಗಳಲ್ಲಿ ಒಂದು ಆನೆ ದಿಢೀರನೇ ದಾಳಿ ಮಾಡಲು ಮುಂದಾಗಿದೆ. ಹೆದರಿದ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ ಮತ್ತೊಂದು ಆನೆ ದಾಳಿ ಮಾಡಲು ಮುಂದಾಗುತ್ತದೆ. ಅಷ್ಟರಲ್ಲೇ, ಆನೆಗಳು ಮರಿಯತ್ತ ಹೆಜ್ಜೆ ಹಾಕಿದ್ದು, ಸ್ವಲ್ಪದರಲ್ಲೇ ಆನೆ ದಾಳಿಯಿಂದ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾನೆ. ಬಂಡೀಪುರದ ಸಿಎಫ್ ಕಚೇರಿ ಸಮೀಪ ಈ ಘಟನೆ ಸಂಭವಿಸಿದೆ.