By Election: ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಬಹುತೇಕ ಫೈನಲ್ – ಯೋಗೇಶ್ವರ್ ಗೆ ಶಾಕ್!!
By Election: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ(BY Election)ಪೈಕಿ ಚನ್ನಪಟ್ಟಣ ಕ್ಷೇತ್ರ ಮೈತ್ರಿ ಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕ್ಷೇತ್ರವನ್ನು ಬಿಜೆಪಿಗೆ ಬಿಡಬೇಕೋ ಅಥವಾ ತಮ್ಮಲ್ಲೇ ಇಟ್ಟುಕೊಳ್ಳಬೇಕೋ ಎಂದು ಜೆಡಿಎಸ್ ಭಾರೀ ಗೊಂದಲದಲ್ಲಿದೆ. ಆದರೆ ಈ ಬೆನ್ನಲ್ಲೇ ಈ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹೆಸರು ಬಹುತೇಕ ಫೈನಲ್ ಆಗಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ ಪಿ ಯೋಗೇಶ್ವರ್ ಗೆ ಬಿಗ್ ಶಾಕ್ ಎದರಾಗಿದೆ ಎನ್ನಲಾಗಿದೆ.
ಹೌದು, ಜೆಡಿಎಸ್ ಮತ್ತು ಬಿಜೆಪಿ(JDS-BJP) ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿಪಿ ಯೋಗೀಶ್ವರ್ ತುದಿಗಾಲಿನಲ್ಲಿ ನಿಂತಿದ್ರೆ, ಅತ್ತ ನಿಖಿಲ್ ಕುಮಾರಸ್ವಾಮಿ ಅವರು ನಿಲ್ಲುತ್ತಾರೆ ಎಂಬ ಮಾತು ಇತ್ತು. ಇದೀಗ ಅದು ನಿಜವೆನಿಸಿದೆ. ಹೌದು..ಬಿಡದಿ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರು ಕರೆದಿದ್ದ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನೇ ಕಣಕ್ಕಿಳಿಸುವ ಬಗ್ಗೆ ನಿರ್ಧಾರವಾಗಿದೆ ಎನ್ನಲಾಗಿದೆ.
ಬಿಡದಿಯ ತೋಟದ ಮನೆಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ(H D kumarswamy) ನೇತೃತ್ವದಲ್ಲಿ ಜೆಡಿಎಸ್ ನ ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ಇದರಲ್ಲಿ ಚನ್ನಪಟ್ಟಣದ ಅಭ್ಯರ್ಥಿಯ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗಳಾದವು. ಬಳಿಕ ಜೆಡಿಎಸ್ ನಾಯಕರೆಲ್ಲ ಒಟ್ಟಿಗೆ ಸೇರಿ ನಿಖಿಲ್ ಕುಮಾರಸ್ವಾಮಿ(Nikhil Kumarswamy) ಅವರನ್ನೇ ನಿಲ್ಲಿಸಬೇಕೆಂಬ ಒಂದು ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತ ಹೀಗಾಗಿ ಟಿಕೆಟ್ಗೆ ಪಟ್ಟು ಹಿಡಿದಿರುವ ಮಿತ್ರ ಪಕ್ಷದ ನಾಯಕ ಸಿಪಿ ಯೋಗೇಶ್ವರ್ ಅವರನ್ನು ಮನವೊಲಿಸಲು ಜೆಡಿಎಸ್ ನಾಯಕರು ಹರಸಾಹಸಪಡುತ್ತಿದ್ದಾರೆ. ಒಂದು ವೇಳೆ ಇದು ಫೈನಲ್ ಆದರೆ ಸಿ ಪಿ ಯೋಗೇಶ್ವರ್ ಮುಂದಿನ ನಠೆ ಏನು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.