Ullala: ತಿಂಗಳ ಹಿಂದಷ್ಟೇ ಖರೀದಿಸಿದ್ದ ಟಿವಿಎಸ್‌ ಸ್ಕೂಟಿ ಬೆಂಕಿಗಾಹುತಿ

Share the Article

Ullala: ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್‌ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿ ಮಾಡಿದ್ದ ಟಿವಿಎಸ್‌ ಕಂಪನಿಯ ಎಂಟಾರ್ಕ್‌ ಸ್ಕೂಟರ್‌ ತನ್ನಷ್ಟಕ್ಕೆ ಉರಿದು ಸುಟ್ಟು ಕರಕಲಾಗಿದೆ. ಜೊತೆಗೆ ಗೋಡೆ, ಕಿಟಕಿಗಳ ಗಾಜುಗಳು, ಒಣಗಲು ಹಾಕಲಾದ ಬಟ್ಟೆಗಳು ಸುಟ್ಟು ಕರಕಲಾಗಿದೆ. ಘಟನೆ ನಡೆದಾಗ ಕೂಡಲೇ ಮನೆ ಮಂದಿ ಎಚ್ಚೆತ್ತು ಬೆಂಕಿಯನ್ನು ನಂದಿಸಿ, ಮನೆಗೆ ವ್ಯಾಪಿಸಲಿದ್ದ ಬೆಂಕಿಯನ್ನು ನಂದಿಸಿ, ಹೆಚ್ಚಾಗುವ ಅನಾಹುತವನ್ನು ತಡೆದಿದ್ದಾರೆ.

ರಾಕೇಶ್‌ ಓದಿನ ಜೊತೆ ಪಾರ್ಟ್‌ ಟೈಂ ಕೆಲಸ ಮಾಡಿ ತೊಕ್ಕೊಟ್ಟಿನ “ಸೋನಾ ಟಿವಿಎಸ್‌” ಶೋರೂಂನಲ್ಲಿ ಸ್ಕೂಟರ್‌ ಖರೀದಿ ಮಾಡಿದ್ದರು. ಎರಡು ದಿನಗಳ ಹಿಂದೆ ಮೊದಲ ಇಎಮ್‌ಐ ಕಂತು ಕಟ್ಟಿದ್ದು. ಸ್ಕೂಟರಿನ ಬ್ಯಾಟರಿ ಸಿಡಿದು ಬೆಂಕಿ ಹತ್ತಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರಾಕೇಶ್‌ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

Leave A Reply