Ten Rupee Coin: ನಿಮ್ಮಲ್ಲಿ ಹತ್ತು ರೂಪಾಯಿ ನಾಣ್ಯ ಇದೆಯಾ? ಇಲ್ಲಿದೆ ನೋಡಿ ಬಿಗ್ ಅಪ್ಡೇಟ್ ನ್ಯೂಸ್
Ten Rupee Coin: ಬಹುತೇಕರ ಬಳಿಯಲ್ಲಿ 10 ರೂಪಾಯಿ ನಾಣ್ಯ (Ten Rupee Coin) ಇದ್ದು, ಈ ನಾಣ್ಯ ಒಂದು ಸಮಯದಲ್ಲಿ ಚಲಾವಣೆಯಲಿಲ್ಲ, ಇದನ್ನು ಯಾರು ಸಹ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದರು. ಯಾವುದೇ ವ್ಯಕ್ತಿಗಳು ಈ ನಾಣ್ಯ ವಿನಿಮಯ ಮಾಡಲು ಒಪ್ಪುತ್ತಿರಲಿಲ್ಲ.
ಹೌದು, ಇದೀಗ ಮತ್ತೆ ಇತ್ತೀಚಿನ ದಿನಗಳಲ್ಲಿ ಇದೇ ಸಮಸ್ಯೆ ಮತ್ತೆ ಸದ್ದು ಮಾಡುತ್ತಿದ್ದು, ಅನೇಕರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸಿರುವ ಹೊಸ 10 ರೂ. ನಾಣ್ಯಗಳನ್ನು ಹಾಗೂ ಹಳೆಯ ಕಾಯಿನ್ಗಳನ್ನು ಬಸ್ ನಿರ್ವಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಕೊಟ್ಟರೆ, ನಾವು ಸ್ವೀಕರಿಸಲ್ಲ. ಈಗ ಇದರ ಅಸ್ತಿತ್ವವಿಲ್ಲ, ಚಲಾವಣೆಯೂ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಕೆಲವರು, ತಮ್ಮ ಸುತ್ತಮುತ್ತಲಿನ ಬ್ಯಾಂಕ್ಗಳಿಗೆ ಭೇಟಿ ನೀಡಿ, ಇದರ ಚಲಾವಣೆ ಇದೆಯೋ? ಇಲ್ಲವೋ? ಎಂದು ಸಿಬ್ಬಂದಿಗಳ ಬಳಿಯೇ ನೇರವಾಗಿ ಸ್ಪಷ್ಟನೆ ಕೇಳಿರುವುದು ಉಂಟು.
ಆದ್ರೆ 10 ರೂ. ಕಾಯಿನ್ ಬಗ್ಗೆ RBI ಹೇಳೋದೇನೆಂದರೆ 10 ರೂಪಾಯಿ ನಾಣ್ಯಗಳು ರದ್ದಾಗಿದೆ, ಚಲಾವಣೆಯಲಿಲ್ಲ ಎಂಬ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದಿದೆ. ಈ ಸಮಸ್ಯೆ ಮನಗಂಡ RBI ಇತ್ತೀಚೆಗಷ್ಟೇ ಅ.14 ಮತ್ತು 15ರಂದು ಆಯ್ದ ಬ್ಯಾಂಕ್ಗಳ ಸಮನ್ವಯದಲ್ಲಿ 10 ರೂ. ಕಾಯಿನ್ಗಳು ಇಂದಿಗೂ ಕಾರ್ಯರೂಪದಲ್ಲಿದೆ ಎಂಬುದನ್ನು ತಿಳಿಹೇಳಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.
ಆದ್ದರಿಂದ, ಹತ್ತು ರೂ. ನಾಣ್ಯಗಳ ವಿನ್ಯಾಸಗಳು ಆಗಾಗ್ಗೆ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಡಿಸೈನ್ನೊಂದಿಗೆ ಮುದ್ರಿತವಾಗಿ, ಚಲಾವಣೆಗೆ ಬರುತ್ತದೆ. ಈ ಕಾಯಿನ್ಗಳು ಕಾನೂನುಬದ್ಧವಾಗಿದ್ದು, ವಹಿವಾಟುಗಳಿಗೆ ಮುಕ್ತವಾಗಿವೆ. ಇಂತಹ ನಾಣ್ಯಗಳನ್ನು ವ್ಯಾಪಾರಸ್ಥರು ಸ್ವೀಕರಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಬಳಿಯಿರುವ ನಾಣ್ಯಗಳನ್ನು ಆರ್ಬಿಐ ಅಡಿಯಲ್ಲಿರುವ ಎಲ್ಲಾ ಶಾಖೆಗಳಲ್ಲಿಯೂ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಕುರಿತಂತೆ ಬ್ಯಾಂಕ್ಗಳಿಗೂ ಆರ್ಬಿಐ ನಿರ್ದೇಶನ ಕೊಟ್ಟಿದೆ.
Üsküdar kameralı tıkanıklık açma Hiçbir yeri kırmadan kaçağı buldular, mükemmel hizmet! https://friichat.com/read-blog/39931