Arrest: ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾದ ಅರಣ್ಯ ಅಧಿಕಾರಿ ಅರೆಸ್ಟ್!!
Arrest: ಪುತ್ತೂರು:ಜಿಲ್ಲೆಯ ಬಿಲ್ಲವ ಸಮಾಜದ ಹೆಣ್ಣುಮಕ್ಕಳ ಹಾಗೂ ಭಜನೆಯಲ್ಲಿ ಸಕ್ರಿಯರಾಗಿರುವ ಮಹಿಳೆಯರ ಹಾಗೂ ಹಿಂದೂ ಸಂಘಟನೆಗಳ ಬಗ್ಗೆ ಕೀಳಾಗಿ ಅವಮಾನ ಮಾಡಿರುವ ಆರೋಪದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ ಪೂಜಾರಿ ಎಂಬವರನ್ನು ಬೆಳ್ಳಾರೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ಸಮಯಗಳ ಹಿಂದೆಯೂ ಸಂಜೀವ ಪೂಜಾರಿ ಹಿಂದೂ ಸಂಘಟನೆ ಹಾಗೂ ಭಜನೆಯಲ್ಲಿ ಪಾಲ್ಗೊಳ್ಳುವ ಹೆಣ್ಣುಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಬರಹಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತೀವ್ರ ಆಕ್ರೋಶದ ಜೊತೆಗೆ ಟೀಕೆಗೆ ಗುರಿಯಾಗಿದ್ದರು.
ಬಳಿಕ ಪ್ರಕರಣ ದಾಖಲಾಗಿ ಸಂಜೀವ ಪೂಜಾರಿಯವರನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಗಳ ಆದೇಶದಂತೆ ಸೇವೆಯಿಂದ ಅಮಾನತು ಗೊಳಿಸಿದ್ದು, ಆಕ್ರೋಷಿತ ಹಿಂದೂ ಯುವಕರ ಗುಂಪು ಸಂಜೀವ ಪೂಜಾರಿಯವರ ಮನೆಗೆ ಕಲ್ಲು ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ದೂರು-ಪ್ರತೀದೂರು ಕೂಡಾ ದಾಖಲಾಗಿತ್ತು.
ಸದ್ಯ ಮತ್ತೊಮ್ಮೆ ತನ್ನ ಅದೇ ಹಳೇ ಚಾಳಿ ಮುಂದುವರಿಸಿದ ಸಂಜೀವ ಪೂಜಾರಿ, ಒಂದು ಪಂಗಡದ ಹೆಣ್ಣುಮಕ್ಕಳ ಬಗ್ಗೆ ಮಾಡಿರುವ ಅವಮಾನಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಭಜನೆ ಮಾಡುವ ಮೂಲಕ ಪ್ರತಿಭಟಿಸಿದ್ದರು.
ಸದ್ಯ ಕೂಲಂಕುಷ ಅವಲೋಕನೆ ನಡೆಸಿದ ಪೊಲೀಸ್ ಇಲಾಖೆ, ಪ್ರಕರಣದ ಗಂಭೀರತೆ ಹಾಗೂ ಹಿಂದೂ ಸಮಾಜದ ಆಕ್ರೋಶ ಅರಿತು ಆರೋಪಿತ ಅರಣ್ಯ ಅಧಿಕಾರಿ ಸಂಜೀವ ಪೂಜಾರಿಯವರನ್ನು ಅವರ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.