Mobile Charging: 100% ಆಗೋ ತನಕ ಮೊಬೈಲ್ ಚಾರ್ಜ್ ಮಾಡ್ತೀರಾ? ನಿಮ್ಮ ಮೊಬೈಲ್ ಬೇಗ ಹಾಳಾಗೋಕೆ ಇದೇ ದೊಡ್ಡ ರೀಸನ್ ಗೊತ್ತಾ?

Mobile Charging: ಸಾಮಾನ್ಯವಾಗಿ ಮೊಬೈಲ್ ಚಾರ್ಜ್ ಖಾಲಿಯಾದಾಗ ಚಾರ್ಜ್ ಗೆ ಹಾಕುವ ಎಲ್ಲರೂ 100% ಚಾರ್ಜ್ ಆಗೋ ತನಕ ಅದನ್ನು ತೆಗೆಯಲ್ಲ. ಆದರೆ ಇದೆಷ್ಟು ಡೇಂಜರ್ ಅನ್ನೋದು ನಿಮಗೆ ಗೊತ್ತಾ? ನಿಮ್ಮ ಮೊಬೈಲ್ ಬೇಗ ಹಾಳಾಗೋಕೆ ಇದೇ ಕಾರಣ.

ಮೊಬೈಲ್​ನಲ್ಲಿ ಚಾರ್ಜ್​(Mobile Charging)ಕಡಿಮೆ ಆಗುವ ಸಮಸ್ಯೆ ಎಂದು ಬಹುತೇಕರು ಅನುಭವಿಸುತ್ತಿದ್ದಾರೆ. ಅದರಲ್ಲೂ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಇದಕ್ಕೆ ನೀವು ಬ್ಯಾಟರಿಯನ್ನು 100% ಚಾರ್ಜ್ ಮಾಡೋದೇ ಮುಖ್ಯ ಕಾರಣವಾಗಿದೆ.

ಹೌದು, ಫೋನ್ ಅನ್ನು ಎಂದಿಗೂ 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು. ಅದು 90% 95% 98% ಇರುವಾಗಲೇ ನೀವು ತೆಗೆದುಬಿಡಬೇಕು. ಹೀಗಿರುವಾಗ ಮಾತ್ರ ನೀವು ಚಾರ್ಜ್ ಮಾಡಿದ್ದು ತುಂಬಾ ಸಮಯ ಹಾಗೆ ಇರುತ್ತೆ. ಅಲ್ಲದೆ ಮೊಬೈಲ್ ಕೂಡ ಉತ್ತಮ ಬಾಳಿಕೆ ಬರುತ್ತದೆ. ಹಾಗೆಯೆ ಚಾರ್ಜ್ 20 ಪ್ರತಿಶತಕ್ಕಿಂತ ಕಡಿಮೆಯಾದರೆ, ಫೋನ್ ಅನ್ನು ತಕ್ಷಣವೇ ಚಾರ್ಜ್ ಮಾಡಿಬಿಡಬೇಕು. ಚಾರ್ಜ್ ಫುಲ್ ಖಾಲಿ ಆಗೋ ತನಕ ಅದನ್ನು ಯೂಸ್ ಮಾಡಬಾರದು.

Leave A Reply

Your email address will not be published.