Sabarimala Online: ಶಬರಿಮಲೆ ದರ್ಶನದ ಆನ್ಲೈನ್ ಟಿಕೆಟ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Sabarimala Online: ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಬುಧವಾರ ಶಬರಿಮಲೆ ದೇವಸ್ಥಾನದಲ್ಲಿ ಮುಂಬರುವ ತೀರ್ಥಯಾತ್ರೆಯ ಋತುವಿನಲ್ಲಿ ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ಪ್ರತಿದಿನ 70,000 ಯಾತ್ರಾರ್ಥಿಗಳು ಶಬರಿಮಲೆ ದರ್ಶನಕ್ಕೆ ತೆರಳಬಹುದು.
ಹೌದು, ಆನ್ಲೈನ್ ನಲ್ಲಿ (Sabarimala Online) ವರ್ಚುವಲ್ ಕ್ಯೂ TDB ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತದೆ. ಈ ಮೂಲಕ ಯಾತ್ರಾರ್ಥಿಗಳು ತಮ್ಮ ಸ್ಲಾಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು ಮತ್ತು ದೇವಾಲಯದ ಪ್ರವೇಶದ್ವಾರದಲ್ಲಿ ತೋರಿಸಬೇಕಾದ QR ಕೋಡ್ ಅನ್ನು ನೀಡಲಾಗುತ್ತದೆ. ಇದರಿಂದ 70,000 ಜನರು ಆನ್ಲೈನ್ನಲ್ಲಿ ಶಬರಿಮಲೆ ದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಇನ್ನು 10,000 ಟಿಕೆಟ್ಗಳನ್ನು ಶಬರಿಮಲೆಗೆ ನೇರವಾಗಿ ಆಗಮಿಸುವ ಭಕ್ತರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಶಬರಿಮಲೆ ವರ್ಚುವಲ್ ಕ್ಯೂ ಪಾಸ್ ಬುಕ್ ಮಾಡುವುದು ಹೇಗೆ?:
ಮೊದಲು ನಿಮ್ಮ ಫೋನ್ ಸಂಖ್ಯೆ ಮತ್ತು ಇ-ಮೇಲ್ ಬಳಸಿ ಲಾಗ್ ಇನ್ ಮಾಡಿ. ನೀವು ಮೊದಲ ಬಾರಿಗೆ ನೋಂದಾಯಿಸುತ್ತಿದ್ದರೆ, ನೀವು ಹೊಸ ಬಳಕೆದಾರ ಐಡಿಯನ್ನು ರಚಿಸಬೇಕಾಗುತ್ತದೆ. ದೃಢೀಕರಣಕ್ಕಾಗಿ OTP ಕಳುಹಿಸಲಾಗುತ್ತದೆ. ನಂತರ ನಿಮ್ಮ ಐಡಿ ಪ್ರೂಫ್ ವಿವರಗಳೊಂದಿಗೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್, ಮತದಾರರ ಕಾರ್ಡ್ ಅಥವಾ ಪಾಸ್ಪೋರ್ಟ್ ಈ ರೀತಿ ಎಲ್ಲ ಮಾನ್ಯವಾದ ಸರ್ಕಾರಿ ಐಡಿ ಪುರಾವೆಯನ್ನು ಸಹ ನೀವು ಒದಗಿಸಬೇಕಾಗುತ್ತದೆ. ನಂತರ “ಮುಂದುವರಿಸಿ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಇಲ್ಲಿ ನೀಡಿರುವ ಫೋನ್ ಸಂಖ್ಯೆಗೆ ನೀವು OTP ಸ್ವೀಕರಿಸುತ್ತೀರಿ. ಇಲ್ಲಿ ಈಗ OTP ನೀಡುವ ಮೂಲಕ ಖಾತೆಯನ್ನು ಪರಿಶೀಲಿಸಿ ಅಲ್ಲಿ ನಿಮ್ಮ ದೇವಾಲಯದ ಭೇಟಿಯ ದಿನವನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ನಿಮ್ಮ ಶಬರಿಮಲೆ ವರ್ಚುವಲ್ ಕ್ಯೂ ಟಿಕೆಟ್ ಅನ್ನು ಬುಕ್ ಮಾಡಲು ಸಬ್ಮಿಟ್ ಎಂಬ ಬಟನ್ ಕ್ಲಿಕ್ ಮಾಡಿ. ಮುಖ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವರ್ಚುವಲ್-ಕ್ಯೂ ಬುಕಿಂಗ್ ಅಗತ್ಯವಿರುವುದಿಲ್ಲ.