RSS: RSS ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು ಗೊತ್ತಾ?! ಇವರ ಮೇಲೆ FIR ಬೀಳೋದಂತೂ ಗ್ಯಾರಂಟಿ!

Share the Article

RSS: RSS ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿದ್ದು ತುಂಬಾ ಗೊಂದಲವಾಗಿಯೇ ಇದೆ. ಒಂದು ರೀತಿಯಲ್ಲಿ ಇವರ ಈ ಮಾತು ಕೇಳಿದಾಗ ಇವರ ಮೇಲೆ FIR ಬೀಳೋದಂತೂ ಗ್ಯಾರಂಟಿ! ಹೌದು, ಒಬ್ಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K.Hariprasad) ಅವರು ಆರ್‌ಎಸ್‌ಎಸ್ ಅಂದ್ರೆ ‘ರೂಮರ್ಸ್‌ ಸ್ಪ್ರೆಡಿಂಗ್ ಸಂಘ್’ ಎಂದು ಹೇಳಿಕೆ ನೀಡಿದ್ದು, ಇದು ಗೊಂದಲಕ್ಕೆ ಕಾರಣವಾಗುತ್ತದ.

ಈಗಾಗಲೇ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಆರ್‌ಎಸ್‌ಎಸ್ (RSS) ಅಂದ್ರೆ ‘ರೂಮರ್ಸ್‌ ಸ್ಪ್ರೆಡ್ಡಿಂಗ್ ಸಂಘ್’. ಅವರು ಕಳ್ಳನನ್ನು ಸುಳ್ಳ ಮಾಡ್ತಾರೆ, ಸುಳ್ಳನನ್ನು ಸತ್ಯವಂತ ಮಾಡ್ತಾರೆ. ಬಡವರು, ಅಮಾಯಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಾರೆ ಎಂದು ಹೇಳಿದ್ದಾರೆ.

ಎಬಿವಿಪಿಯವರು ಮೊದಲು ಮುಸ್ಲಿಮರ ಬಗ್ಗೆ ಹೇಳೋದಿಲ್ಲ. ಶೂದ್ರ ಹುಡುಗರು ಸಿಕ್ಕಿದರೆ ಮೊದಲು ರಾಷ್ಟ್ರ ಕಟ್ಟಬೇಕು ಅಂತಾರೆ. ಆಮೇಲೆ ನಿಧಾನವಾಗಿ ಅವರ ತಲೆಯಲ್ಲಿ ಮುಸ್ಲಿಂ ದ್ವೇಷದ ಬೀಜ ಬಿತ್ತುತ್ತಾರೆ. ಎಲ್ಲಾ ಬಿಟ್ಟು ದೇಶಭಕ್ತರು ಎನ್ನುವ ಆರ್‌ಎಸ್‌ಎಸ್‌ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡಲ್ಲ. ಉದಾಹರಣೆಗೆ 52 ವರ್ಷ ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿಯ ದೀನ್ ದಯಾಳ್ ಉಪಾಧ್ಯಾಯವರನ್ನು ಕೊಂದವರು ಯಾರು? ಅವರ ಕೊಲೆ ಮಾಡಿದ್ದು, ಯಾರು ಅಂತಾ ಸಂಘಪರಿವಾರ ಹೇಳಬೇಕು. ಯಾಕೆಂದರೆ ದೀನ್ ದಯಾಳ್ ಉಪಾಧ್ಯಾಯ ಕೊಲೆ ಆಗಿರುವ ವಿಚಾರದಲ್ಲಿ ಜನರು ಸಂಘದ ಕಡೆಯೇ ತೋರಿಸುತ್ತದೆ. ಇದರ ಬಗ್ಗೆ ಯಾರೂ ಸ್ಪಷ್ಟವಾಗಿ ಹೇಳುತ್ತಲೇ ಇಲ್ಲ. ಆರ್‌ಎಸ್‌ಎಸ್ ನವರು ಬಡವರೇ ಆಗಿದ್ದು, ಅಲ್ಲಿ ಅಧಿಕಾರ, ಸಂಪತ್ತು ಪಡೆಯುವವರು ಬೇರೆ, ಜೈಲಿಗೆ ಹೋಗುವವರು ಬೇರೆಯೇ ಇದ್ದಾರೆ. ಇನ್ನು ಸಂಘ ಪರಿವಾರದ ಸಹವಾಸದಿಂದ ಹೋರಾಟ ಮಾಡಿದವರು ಒಂದೋ ಜೈಲಿಗೆ ಹೋಗಬೇಕು, ಇಲ್ಲ ಸ್ಮಶಾನ ಸೇರಬೇಕು. ಉದಾಹರಣೆಗೆ ಬೊಮ್ಮಾಯಿ ಮಗ, ಯಡಿಯೂರಪ್ಪ ಮಗ ಏನಾದರೂ ಬೀದಿಯಲ್ಲಿ ಹೋರಾಟ ಮಾಡಿದ್ರಾ? ಹೋರಾಟ ಮಾಡೋದೆಲ್ಲ ಪುನೀತ್ ಕೆರೆಹಳ್ಳಿ ಥರದವರು. ಎಂದು ಖಡಕ್ ಆಗಿ ಹೇಳಿದ್ದಾರೆ.

Leave A Reply