Valmiki scam: ವಾಲ್ಮಿಕಿ ಹಗರಣ ಆರೋಪಿ ಮಾಜಿ ಸಚಿವ ನಾಗೇಂದ್ರ ಬಿಡುಗಡೆ: ಬಿಜೆಪಿ ವಿರುದ್ಧ ಕಿಡಿ

Valmiki scam: ಜೈಲಿನಿಂದ ಹೊರಬಂದ ಮಾಜಿ ಸಚಿವ ನಾಗೇಂದ್ರ, ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿದೆ ಆ ಸರ್ಕಾರವನ್ನ ಅಸ್ಥಿರ ಗೊಳಿಸುವ ಷಡ್ಯಂತ್ರ ಬಿಜೆಪಿ ಸರ್ಕಾರ ಮಾಡುತ್ತಿದೆ. ಮೂರು ತಿಂಗಳಿನಿಂದ ಇಡಿ ನನಗೆ ಕಿರುಕುಳ ಕೊಟ್ಟಿದೆ. ವಾಲ್ಮೀಕ ಹಗರಣದಲ್ಲಿ ಏನೂ ಪಾತ್ರವಿಲ್ಲದಿದ್ದರೂ ಏಕಾಏಕಿ ಬಂಧನ ಮಾಡಿದ್ರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಕೇಂದ್ರದ ಬಿಜೆಪಿ ನಾಯಕರ ಒತ್ತಡದಿಂದ ಇಡಿ ನನ್ನ ಮುಖಾಂತರ ರಾಜ್ಯ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಲು ಒತ್ತಾಯ ಮಾಡುದ್ರು.ಅದಕ್ಕೆ ನಾನು ನಿರಾಕರಿಸಿದ್ದೆ. ನನ್ನ ಪಾತ್ರವೇ ಇಲ್ಲವೆಂದ್ರೆ ಸಿದ್ದರಾಮಯ್ಯ ಪಾತ್ರ ಎಲ್ಲಿಂದ ಬರುತ್ತೆ. ಬ್ಯಾಂಕ್ ನಲ್ಲಿ ಹಗರಣಕ್ಕೂ ನಮಗೂ ಸಂಬಂಧವೇ ಇಲ್ಲ ಎಂದರು.
ಮುಡಾ ಹಗರದಲ್ಲೂ ಸುಮ್ಮನೇ ಪಾದಯಾತ್ರೆ ಮಾಡುದ್ರು. ದಪ್ಪ ಚರ್ಮದವರು ಹೊಟ್ಟೆ ಕರಗಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ಯಾವುದೇ ಆದೇಶವಿಲ್ಲದಿದ್ದರೂ ಬ್ಯಾಂಕ್ ಹಣ ವರ್ಗಾವಣೆ ಮಾಡಿಕೊಂಡಿದೆ. ಇದು ರಾಜ್ಯಸರ್ಕಾರದ ಹಗರಣವಲ್ಲ ಬ್ಯಾಂಕ್ ನವರ ಹಗರಣ. ಇಡಿ ವಿನಾಕಾರಣ ಸಿದ್ದರಾಮಯ್ಯ ಹೆಸರು ತಳುಕುಹಾಕಲು ಷಡ್ಯಂತ್ರ ಮಾಡಿದೆ ಬಿಜೆಪಿ ಎಂದು ಆರೋಪ ಮಾಡಿದರು.
ನಾನು ಯಾವುದೇ ಶಿಫಾರಸ್ಸು ಮಾಡಿಲ್ಲ. ನ್ಯಾಯಾಂಗದ ಮೇಲೆ ಕಾಂಗ್ರೇಸ್ ಗೆ ನಂಬಿಕೆ ಇದೆ ನನಗೆ ಇಂದು ಬೇಲ್ ಸಿಕ್ಕಿದೆ. ಯಾವುದೇ ಕಾರಣಕ್ಕೂ ಹಣ ದುರ್ಬಳಕೆ ಆಗಿಲ್ಲ. ಎಸ್ ಐಟಿ ಕಣ್ಣು ಮುಚ್ಚಿ ಕುಳಿತುಕೊಂಡಿದ್ಯಾ? ಸಿಬಿಐಗಿಂತ ಎಸ್ ಐಟಿ ಒಳ್ಳೆಯ ಅಧಿಕಾರಿಗಳು. ಮತ್ತೆ ಸಚಿವ ಸ್ಥಾನ ಕೊಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಬಿಜೆಪಿಯನ್ನ ಕರ್ನಾಟಕದಿಂದ ಕಿತ್ತೊಗೆಯುವ ಕೆಲಸವನ್ನ ಮಾಡ್ತೀವಿ. ಮೂರು ಉಪಚುನಾವಣೆಯಲ್ಲಿ ಮುಖ್ಯವಾಗಿ ಬಳ್ಳಾರಿಯನ್ನ ಕಾಂಗ್ರೆಸ್ ತೆಕ್ಕೆಗೆ ತಂದು ನಮ್ಮ ಧೈರ್ಯವನ್ನ ತೋರ್ತಿವಿ ಎಂದು ನಾಗೇಂದ್ರ ಹೇಳಿದರು.