Rashmika Mandanna: ಡೀಪ್ ಫೇಕ್ ವಿಡಿಯೋನಿಂದ ನೊಂದಿರುವ ರಶ್ಮಿಕಾ ಮಂದಣ್ಣಳ ಹೊಸ ನಿರ್ಧಾರ

Rashmika Mandanna: ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆ ಇರುವ ನಟಿ ಆಗಿದ್ದಾರೆ. ಸದ್ಯಕ್ಕೆ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ.

ಹೌದು, ಈಗಾಗಲೇ ಡೀಪ್ ಫೇಕ್ ವಿಡಿಯೋನಿಂದ ಸಮಸ್ಯೆ ಎದುರಿಸಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ ಆಗಿದ್ದಾರೆ. ಈ ಕುರಿತು ನಟಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ವಿಡಿಯೋದಲ್ಲಿ ರಶ್ಮಿಕಾ ಮಾತನಾಡಿ, ಇದರ ಬಗ್ಗೆ ಸ್ಟ್ರಾಂಗ್ ಸ್ಟಾಂಡ್ ತೆಗೆದುಕೊಳ್ಳುತ್ತಿದ್ದೇನೆ. ಸೈಬರ್ ಅಪರಾಧವು ಅಪಾಯಕಾರಿ ಮತ್ತು ವ್ಯಾಪಕವಾದ ಸಮಸ್ಯೆಯಾಗಿದೆ. ಅದು ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳು, ವೈಯಕ್ತಿಕ ವಿಚಾರ, ವ್ಯವಹಾರಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಸೈಬರ್ ಸಮಸ್ಯೆಯನ್ನು ಅನುಭವಿಸಿರುವ ವ್ಯಕ್ತಿಯಾಗಿ, ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ಸೈಬರ್ ಸುರಕ್ಷತೆಯ ಸಂದೇಶವನ್ನು ಪ್ರಚಾರ ಮಾಡಲು ನಾನು ಉತ್ಸುಕಗಳಾಗಿದ್ದೇನೆ. ಈ ಕಾರ್ಯದಲ್ಲಿ ನಾನು ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೇನೆ. ಎಲ್ಲರೂ ಒಟ್ಟಾಗಿ ಭಾರತವನ್ನು ಸೈಬರ್ ಅಪರಾಧಗಳಿಂದ ಮುಕ್ತಗೊಳಿಸೋಣ ಎಂದು ನಟಿ ತಿಳಿಸಿದ್ದಾರೆ.

ಈ ಮೂಲಕ ಇನ್ನೂ ಮುಂದೆ ಅಪಾಯಕಾರಿ ಸೈಬರ್ ಕ್ರೈಂ, ಡೀಪ್ ಫೇಕ್ ವಿಡಿಯೋ, ಆನ್ ಲೈನ್ ಫ್ರಾಡ್ ಇನ್ನಿತರೆ ಸೈಬರ್ ಸಂಬಂಧಿ ಅಪರಾಧಗಳ ಕುರಿತಾಗಿ ಸಾಕ್ಷರತೆ, ಜಾಗೃತೆ ಮೂಡಿಸುವ ಕಾರ್ಯವನ್ನು ರಶ್ಮಿಕಾ ಮಾಡಲಿದ್ದಾರೆ.

Leave A Reply

Your email address will not be published.