Railway Tracks: ದೇಶಾದ್ಯಂತ ಚಾಚಿಕೊಂಡಿರೋ, ಸುಲಭವಾಗಿ ಸಿಗೋ ರೈಲ್ವೆ ಹಳಿಯನ್ನು ಕಳ್ಳರು ಕದಿಯೋದಿಲ್ಲ ಯಾಕೆ? ಇದರ ಹಿಂದಿದೆ ನೋಡಿ ಬಲವಾದ ರೀಸನ್!!
Railway Tracks: : ಭಾರತೀಯ ರೈಲ್ವೆ(Indian Railway) ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ಹೊಂದಿರೋ ಹೆಮ್ಮೆಯ ರೈಲ್ವೇ ನಮ್ಮದು. ದೇಶದ ಜೀವನಾಡಿಯಾದ ನಮ್ಮ ರೈಲ್ವೇ ಇಲಾಖೆಯು ಪ್ರತಿದಿನ ಸುಮಾರು 2.5 ಕೋಟಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತವೆ. ರೈಲ್ವೇ ಇಲಾಖೆ ಬಗ್ಗೆ ಆಗಾಗ ನಾವು ಕೆಲವು ಕುತೂಹಲಕರವಾದ ವಿಚಾರಗಳನ್ನು ಕೇಳುತ್ತಿರುತ್ತೇವೆ. ಅಂತೇಯೇ ಇದೀಗ ಮತ್ತೊಂದು ಹೊಸ ವಾಚಾರವನ್ನು ನಾವು ಹೊತ್ತುತಂದಿದ್ದೇವೆ.
ಇಂದು ಕಳ್ಳತನ ಎಂಬುದು ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ದೈಹಿಕವಾಗಿ, ಮಾನಸಿವಾಗಿ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೀಗೆ ಎಲ್ಲಾ ರೀತಿ ಕಳ್ಳತನ ಮಾಡೋ ಕಳ್ಳರನ್ನು ನಾವಿಂದು ನೋಡಬಹುದು. ವಸ್ತುಗಳು, ಹಣ, ಚಿನ್ನ ಬಿಡಿ ಒಂದು ಕಬ್ಬಿಣದ ತುಂಡು ಬಿದ್ದರೂ ಅದನ್ನು ಬಿಡೋದಿಲ್ಲ. ಆದರೆ ದೇಶಾದ್ಯಂತ ಉದ್ದಕ್ಕೂ ಹರಡಿಕೊಂಡಿರುವ, ಯಾವ ಕಾವಲೂ ಇಲ್ಲದೆ ಮೈ ಚಾಚಿ ಮಲಗಿರುವ ಅಷ್ಟೊಂದು ದೊಡ್ಡ ಕಬ್ಬಿಣದ ರೈಲ್ವೆ ಹಳಿಗಳನ್ನೇಕೆ(Railway Tracks) ಯಾರೂ ಇದುವರೆಗೂ ಕದ್ದಿಲ್ಲ, ಯಾವ ಖದೀಮನೂ ಇದಕ್ಕೆ ಕನ್ನ ಹಾಕಲು ಯಾಕೆ ಯತ್ನಿಸಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈಗಲಾದರೂ ನಿಮ್ಮ ತಲೆಗೆ ಈ ಪ್ರಶ್ನೆ ಬಂದಿರಬಹುದು. ಹಾಗಿದ್ರೆ ಯಾಕೆ ಯಾರು ಇಂತಹ ಸಾಹಸಕ್ಕೆ ಕೈ ಹಾಕಿಲ್ಲ ಎಂಬುದನ್ನು ನೋಡೋಣ ಬನ್ನಿ.
ಭಾರತೀಯ ರೈಲ್ವೆ ಇಲಾಖೆ ರೈಲುಗಳ ಸಂಚಾರಕ್ಕೆ ಬಳಸಿರುವ ಲೋಹವನ್ನು ಯಾವ ಕಳ್ಳನು ಮುಟ್ಟಲಾರ. ರೈಲು ಹಳಿಗಳು ಕಳ್ಳತನ ಆಗದಿರಲು ವಿಶೇಷ ಕಾರಣ ಒಂದಿದೆ. ಕಾರಣ ಈ ಹಳಿಗಳನ್ನು ಅತ್ಯಂತ ಭದ್ರವಾಗಿ ಕೆಳಭಾಗದ ಸಿಮೆಂಟ್ ಸ್ಲೀಪರ್ಸ್‌ಗಳಿಗೆ ಬಿಗಿಯಾಗಿ ಬಂಧಿಸಲಾಗಿರುತ್ತದೆ. ಸಿಮೆಂಟ್ ಸ್ಲೀಪರ್ಸ್‌ನಿಂದ ಲೋಹವನ್ನು ಬೇರ್ಪಡಿಸೋದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಕಳ್ಳರು ಅದನ್ನು ಕದಯೋ ಯೋಚನೆ ಮಾಡಲಾರರು.
ಅಲ್ಲದೆ ರೈಲು ಹಳಿಯ ಲೋಹವು ಮಿಶ್ರ ಧಾತುವಿನಿಂದ ಮಾಡಲಾಗಿರುತ್ತದೆ. ಈ ಧಾತು ಕತ್ತರಿಸೋದು ಅಷ್ಟು ಸುಲಭದ ಮಾತಲ್ಲ. ರೈಲು ಹಳಿಯನ್ನು ಸಂಪೂರ್ಣವಾಗಿ ಕಬ್ಬಿಣದಿಂದ ಮಾಡಿರಲ್ಲ. ರೈಲು ಹಳಿಯನ್ನು ಮಿಶ್ರಲೋಹ ಉಕ್ಕಿನಿಂದ ಮಾಡಲಾಗಿದ್ದು, ಕಬ್ಬಿಣ ಮತ್ತು ಇಂಗಾಲದ ಸಂಯೋಜನೆಯಾಗಿದೆ. ಇವುಗಳ ತೂಕ ಅತ್ಯಧಿಕವಾಗಿರುತ್ತದೆ. ಉಕ್ಕಿನ ತೂಕ ಹೆಚ್ಚಾಗಿರುವ ಕಾರಣ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟಕರವಾಗಿದೆ. ಸಾಮಾನ್ಯ ರೈಲು ಹಳಿಯ ತೂಕ ಪ್ರತಿ ಮೀಟರ್‌ಗೆ ಸುಮಾರು 50 ರಿಂದ 60 ಕೆಜಿ ಹೊಂದಿರುತ್ತವೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ನಿಯಮಿತವಾಗಿ ರೈಲು ಹಳಿಗಳ ಸುತ್ತಲೂ ಗಸ್ತು ತಿರುಗುತ್ತಾರೆ. ಒಂದು ವೇಳೆ ಕದ್ದರೂ ಯಾವ ವ್ಯಾಪಾರಿಯೂ ಈ ಲೋಹವನ್ನು ಖರೀದಿಸುವುದಿಲ್ಲ. ಖರೀದಿ ಮಾಡಿದ ವ್ಯಾಪಾರಿಯೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ವ್ಯಾಪಾರಿಗಳು ಸುಲಭವಾಗಿ ರೈಲು ಹಳಿಯ ಲೋಹವನ್ನು ಸುಲಭವಾಗಿ ಗುರುತಿಸುತ್ತಾರೆ.
ಇಷ್ಟು ಮಾತ್ರವಲ್ಲದೆ ಅಳವಡಿಕೆ ಮಾಡಿರುವ ಹಳಿಯನ್ನು ಹೇಗೋ ಮಾಡಿ ಕದ್ದರೆ ಅದರ ಅಪಾಯ ತುಂಬಾ ಗಂಭೀರ ಸ್ವರೂಪದಾಗಿರುತ್ತದೆ. ವೇಗವಾಗಿ ಚಲಿಸುತ್ತಿರುವ ರೈಲು ಅಪಘಾತಕ್ಕೊಳಗಾಗಿ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಷ್ಟು ದೊಡ್ಡಪ್ರಮಾಣದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಯಾವ ಕಳ್ಳನೂ ಮುಂದಾಗಲ್ಲ. ರೈಲ್ವೆ ಹಳಿಗಳನ್ನು ಗುರುತಿಸಲು ವಿಶೇಷ ಗುರುತುಗಳನ್ನು ಮಾಡಲಾಗಿರುತ್ತದೆ. ಇದರಿಂದ ಕಳ್ಳರು ಸುಲಭವಾಗಿ ಸಿಕ್ಕಿ ಬೀಳುತ್ತಾರೆ.