Metro: ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್- ಇನ್ಮುಂದೆ ಮೆಟ್ರೋದಲ್ಲಿ ವಾಶ್ ರೂಂ ಬಳಸಲೂ ಬೇಕು ಪಾಸ್ !!

Metro: ಮೆಟ್ರೋ ತಂದಿರುವ ನಿಯಮವೊಂದು ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿದೆ. ಅದೇನೆಂದರೆ ಪ್ರಯಾಣಿಕರು ಇನ್ಮುಂದೆ ಶೌಚಾಲಯ ಬಳಸಬೇಕಾದರೆ ಪಾಸ್ ಪಡೆದು ಹೋಗಬೇಕೆಂದು ಮೆಟ್ರೋ ತಿಳಿಸಿದೆ.
ಹೌದು, ಮೆಟ್ರೋ(Metro)ದಲ್ಲಿ ಪ್ರಯಾಣಿಸುವವರಿಗೆ ಶೌಚಾಲಯ ಬಳಸಲು ಟಾಯ್ಲೆಟ್ ಪಾಸ್ ನೀಡಲಾಗುವುದು. ಶೌಚಾಲಯವನ್ನು ಪ್ರವೇಶಿಸುವ ಮುನ್ನ ಆ ಪಾಸ್ ನಲ್ಲಿ ತಮ್ಮ ಹೆಸರು,ಫೋನ್ ಸಂಖ್ಯೆ ಮತ್ತು ಟಿಕೆಟ್ ಟೋಕನ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಮೆಟ್ರೋ ಸಂಸ್ಥೆ ತಿಳಿಸಿದೆ. ಹಾಗಂತ ಇದು ಬೆಂಗಳೂರಿನ ನಮ್ಮ ಮೆಟ್ರೋ ಅವರು ಹೊರಡಿಸಿದ ನಿಯಮವಲ್ಲ. ಮುಂಬೈ ಮೆಟ್ರೋ ಅವರು ಹೊರಡಿಸಿದ ನಿಯಮ.
ಈ ನಿಯಮದ ಪ್ರಕಾರ,ನಿಲ್ದಾಣದ ವ್ಯಾಪ್ತಿಯಲ್ಲಿ ಟಿಕೆಟ್ ಪಡೆದು ಒಳ ಪ್ರವೇ ಶಿಸಿದವರು ಮಾತ್ರ ಶೌಚಾಲಯವನ್ನು ಬಳಸಬಹುದು. ಮೆಟ್ರೋ ಪ್ರಯಾಣಿಕರಲ್ಲದವರು ಬಂದು ಮೆಟ್ರೋ ಶೌಚಲಯವನ್ನು ಬಳಸುವಂತಿಲ್ಲ. ಈ ಮೂಲಕ ಯಾರು ಬೇಕೋ ಅವರು, ಹೇಗೆ ಬೇಕೋ ಹಾಗೆ ಮೆಟ್ರೋ ಟಾಯ್ಲೆಟ್ ಬಳಸುವುದಕ್ಕೆ ನಿರ್ಬಂಧ ಹಾಕಿದ ಹಾಗೆ ಆಗಿದೆ.
ಇನ್ನು ಈ ಬಗ್ಗೆ ಪ್ರಯಾಣಿಕರು ರೆಡ್ಡಿಟ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಈಪೋಸ್ಟ್ ಹಂಚಿಕೊಳ್ಳುತ್ತಿದ್ದ ಹಾಗೆ ವೈರಲ್ ಆಗಿದೆ. ಇಂತಹ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರಿಂದ ಸಾರ್ವಜನಿಕ ಸೌಲಭ್ಯಗಳ ಬಳಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ಕೆಲವು ವ್ಯಾಖ್ಯಾನಕಾರರು ಸಲಹೆ ನೀಡಿದರು. ಆದರೆ ಶೌಚಾಲಯ ಬಳಸಲು ಫೋನ್ ನಂಬರ್ ನಂಥಹ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಅಗತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ.