Sabarimala Online: ಶಬರಿಮಲೆ ಅಯ್ಯಪ್ಪ ದರ್ಶನದಲ್ಲಿ ಕೇರಳ ಸರ್ಕಾರ ಮಹತ್ತರ ಬದಲಾವಣೆ!

Sabarimala Online: ಈಗಾಗಲೇ ಕೇರಳ ಸರ್ಕಾರವು, ಶಬರಿಮಲೆ ಯಾತ್ರೆಯ ವೇಳೆ ಆನ್‌ಲೈನ್‌ ನೋಂದಣಿ ಮಾಡಿಸಿಕೊಂಡರೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂಬ ನಿರ್ಧಾರ ಕೈಗೊಂಡಿತ್ತು. ಈ ಹಿನ್ನಲೆ ಕೇರಳ ಸರ್ಕಾರ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದ್ದು ತನ್ನ ನಿರ್ಧಾರವನ್ನು ಬದಲಾವಣೆ ಮಾಡಿದೆ.

ಹೌದು, ನೋಂದಣಿ ಇಲ್ಲದೇ ಏಕಾಏಕಿ ಬರುವ ಭಕ್ತರನ್ನು ನಿಯಂತ್ರಿಸಿ ನೂಕುನುಗ್ಗಲು ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಕೇರಳ ಸರ್ಕಾರವು ಶಬರಿ ಮಲೆ ದರ್ಶನಕ್ಕೆ ಬರುವವರಿಗೆ ಈ ವರ್ಷದಿಂದ ಆನ್‌ಲೈನ್‌ ನೋಂದಣಿ ಕಡ್ಡಾಯಗೊಳಿಸಿರುವ ನಿರ್ಧಾರವಾವನ್ನ ದಲಿಸಿದ್ದು, ಆನ್‌ಲೈನ್‌ (Sabarimala Online) ನೋಂದಣಿ ಇಲ್ಲದೇ ಇದ್ದರೂ ಸ್ಪಾಟ್‌ ನೋಂದಣಿ ಮೂಲಕ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ದರ್ಶನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ಭಕ್ತರು ನಿರಾಳವಾಗಲಿದ್ದಾರೆ.

ಮುಖ್ಯವಾಗಿ ವರ್ಚುವಲ್‌ ಆಗಿ ಕ್ಯೂ ಬುಕಿಂಗ್‌ ಮಾಡದೆ ಆಗಮಿಸಿದ್ದರೂ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಸುಗಮ ದರ್ಶನ ವ್ಯವಸ್ಥೆ ಮಾಡಲಾಗುವುದು. ಮತ್ತು ಶಬರಿಮಲೆಗೆ ಭೇಟಿ ನೀಡುವ ಯಾವ ಭಕ್ತರೂ ನಿರಾಶರಾಗುವುದು ಬೇಡ ಎಂದು ಕೇರಳ ಸರಕಾರ ಕೊನೆಗೂ ಸ್ಪಷ್ಟನೆ ನೀಡಿದೆ.

ಸದ್ಯಕ್ಕೆ ಈಗ ಸ್ಪಾಟ್‌ ಬುಕ್ಕಿಂಗ್‌ ಕೇಂದ್ರಗಳೂ ಇರಲಿವೆ. ಅಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಆನಂತರವೂ ಅವಕಾಶ ಆಗದೇ ಇದ್ದರೆ ವಿಶೇಷ ದರ್ಶನವೂ ಇರಲಿದ್ದು. ಪ್ರತಿ ಭಕ್ತರಿಗೂ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ.

Leave A Reply

Your email address will not be published.