Greater Raja seat: ಗ್ರೇಟರ್ ರಾಜಾಸೀಟ್ ಹಗರಣ: ಲೋಕಾಯುಕ್ತರಿಂದ ತನಿಖೆ: ಹಗರಣದ ರೂವಾರಿಗಳು ಯಾರು?
Greater Raja seat: ಮಡಿಕೇರಿಯ ಗ್ರೇಟರ್ ರಾಜ ಸೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಲೋಕೋಪಯೋಗಿ(lokayukta) ಅಧಿಕಾರಿಗಳು(Officer) ವಿಚಾರಣೆಗೆ ಹಾಜರಾಗಿದ್ದಾರೆ.
ಹಿಂದಿನ ಕಾರ್ಯಪಾಲಕ ಅಭಿಯಂತರುಗಳಾದ ಮದನ್ ಮೋಹನ್, ನಾಗರಾಜ್, ಅಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶಿವರಾಂ, ಪ್ರಸ್ತುತ ಕಾರ್ಯಪಾಲಕ ಅಭಿಯಂತರಾದ ಸಿದ್ದೇಗೌಡ ,ಆರೋಪಿತ ಜ್ಯೂನಿಯರ್ ಇಂಜಿನಿಯರ್ ಕೆ.ಎಲ್.ದೇವರಾಜ್ ವಿಚಾರಣೆಯಲ್ಲಿ ಭಾಗಿಯಾಗಿ ಲೋಕಾಯುಕ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇಂದು ಈ ಹಿಂದಿನ ದಾಖಲೆಗಳ ಬಂಡಲ್ ಹೊತ್ತು ಮಡಿಕೇರಿ ಲೋಕೋಪಯೋಗಿ ಸಿಬ್ಬಂದಿಗಳು ತಿರುಗುತ್ತಿರುವ ಪರಿಸ್ಥಿತಿ ಕಂಡು ಬಂದಿದೆ. ನಿವೃತ್ತರಾದ ನಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಂ ಎಂ.ಬಿ.ಪುಸ್ತಕಕ್ಕೆ ಸಹಿ ಮಾಡಿದ್ದಾರೆ ಎಂಬುದರ ಕುರಿತು ವಿಚಾರಣೆ ನಡೆದಿದೆ.
ಕರ್ನಾಟಕ ಲೋಕಾಯುಕ್ತ ತನಿಖಾಧಿಕಾರಿ ತೇಜಶ್ರೀ ಬಿ.ಮದ್ದೋಡಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಾದ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಸಮ್ಮುಖದಲ್ಲಿ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ.