Kiccha Sudeep: ತಾನೇಕೆ ‘ಬಿಗ್ ಬಾಸ್’ ಗೆ ವಿದಾಯ ಹೇಳಿದೆ? ಬಿಗ್ ಬಾಸ್ ತೊರೆಯುವ ಹಿಂದಿನ ರಿಯಲ್ ಕಾರಣ ಬಿಚ್ಚಿಟ್ಟ ಕಿಚ್ಚ
Kiccha Sudeep: ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್(Bigg Boss) ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್(Kiccha Sudeep) ಇದೀಗ ಮುಂದಿನ ಸೀಸನ್ ಮೂಲಕ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಬಲವಾದ ಕಾರಣವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಿಚ್ಚನಿಗೆ ತುಂಬಾ ಅವಮಾನ ಆದ ಕಾರಣದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಬೆನ್ನಲ್ಲೇ ಸುದೀಪ್ ಅವರು ಬಿಗ್ ಬಾಸ್ ಗೆ ವಿದಾಯ ಹೇಳಲು ಕಾರಣವೇನೆಂದು ತಿಳಿಸಿದ್ದಾರೆ.
ಹೌದು, ಆಪ್ತ ಮೂಲಗಳ ಪ್ರಕಾರ, ಬಿಗ್ ಬಾಸ್ ಶೋನಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಸುದೀಪ್ ಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾಡಿದ ಟ್ವೀಟ್ ಕೂಡ ಇಂಬು ನೀಡಿತ್ತು. ಆದರೀಗ ಸುದೀಪ್ ಅವರೇ ಇದೆಲ್ಲದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಟ್ವೀಟ್ ಸುದೀಪ್ ಅವರು ‘ನನ್ನ ಟ್ವೀಟ್ ನೋಡಿ, ಗೌರವಿಸಿ ಬಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬುತ್ತದೆ. ಈ ಪ್ರೀತಿ ಗೌರವವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನನ್ನ ಹಾಗೂ ಚಾನೆಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ನನಗೆ ಅಗೌರವವನ್ನು ಚಾನೆಲ್ ತೋರಿದೆ ಎಂದು ವಿಡಿಯೋ, ಕಮೆಂಟ್ ಮಾಡುವವರಿಗೆ ನಾನು ಹೇಳಬಯಸುವುದೆಂದರೆ, ನಾನು ಮತ್ತು ಚಾನೆಲ್ ದೀರ್ಘವಾದ ಹಾಗೂ ಧನಾತ್ಮಕವಾದ ಜರ್ನಿ ಮಾಡಿದ್ದೇವೆ. ಭಿನ್ನಾಭಿಪ್ರಾಯ, ಅಗೌರವ ಎಂಬುದೆಲ್ಲ ಸುಳ್ಳು, ಸಾಕ್ಷ್ಯ ಇಲ್ಲದ್ದು. ಬಿಗ್ಬಾಸ್ನಿಂದ ಹೊರಹೋಗುತ್ತಿರುವ ಕುರಿತು ಮಾಡಿದ ಟ್ವೀಟ್ ಸ್ಪಷ್ಟವಾಗಿತ್ತು ಮತ್ತು ನೇರವಾಗಿತ್ತು, ಕಲರ್ಸ್ ವಾಹಿನಿಯೊಟ್ಟಿಗೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಈಗಿನ ನಿರ್ದೇಶಕ ಪ್ರಕಾಶ್, ಅಸಾಧ್ಯ ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಇಲ್ಲದ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿತ್ವ ನನ್ನದಲ್ಲ’ ಎಂದಿದ್ದಾರೆ.
ಇದರಿಂದಾಗಿ ಇದುವರೆಗೂ ಹರಿದಾಡುತ್ತಿದ್ದ ‘ಬಿಗ್ ಬಾಸ್ ಸುದೀಪ್ ಅವರಿಗೆ ಮರ್ಯಾದೆ ನೀಡಿಲ್ಲ, ಅವರು ಹೇಳಿದ್ದನ್ನು ಕೇಳದೆ ಅಗೌರವ ತೋರಿದೆ’ ಎಂಬೆಲ್ಲಾ ಸುದ್ದಿಗಳು ಸುಳ್ಳೆಂಬುದು ತಿಳಿದುಬಂದಿದೆ.
Touch to Unlock Very well presented. Every quote was awesome and thanks for sharing the content. Keep sharing and keep motivating others.