Train Viral News: ಮಗಳಿಗಾಗಿ 16 ಕಿಮೀ ಓಡಿದ ಅಪ್ಪ! ಚಲಿಸುತ್ತಿದ್ದ ರೈಲು ಕಿಟಕಿಯಿಂದ ಜಾರಿ ಬಿದ್ದ ಮಗವನ್ನು ಉಳಿಸಿಕೊಂಡ ರಿಯಲ್ ಹೀರೋ ಇವನೇ ನೋಡಿ

Share the Article

Train Viral News: ಮಗಳ ಪಾಲಿಗೆ ತಂದೆಯೇ ರಿಯಲ್ ಹೀರೊ ಆಗಿರ್ತಾನೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೌದು, ವೇಗವಾಗಿ ಚಲಿಸುತ್ತಿದ್ದ ರೈಲಿನ (Train Viral News) ಎಮರ್ಜೆನ್ಸಿ ಕಿಟಕಿಯಿಂದ (Emergency window) ಪುಟ್ಟ ಮಗಳು ಹೊರಗೆ ಜಾರಿಬಿದ್ದ ಕೂಡಲೇ ಅಪ್ಪ ರೈಲು ನಿಲ್ಲಿಸಿ 16 ಕಿಲೋಮೀಟರ್‌ ಹಿಂದಕ್ಕೆ ಓಡಿಹೋಗಿ ಆಕೆಯನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ (Viral news) ಉತ್ತರಪ್ರದೇಶದಲ್ಲಿ ನಡೆದಿದೆ.

ಮಥುರಾದ ಅರವಿಂದ ಎಂಬಾತ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್​ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಗಳನ್ನು ಮಲಗಿಸಿದ್ದು, ಅಷ್ಟರಲ್ಲಿ ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು ಗಾಳಿ ಬರಲಿ ಎಂದು ತುರ್ತು ಕಿಟಕಿಯನ್ನು ತೆರೆದಾಗ ಆಕೆ ಜಾರಿ ಹೊರಗೆ ಬಿದ್ದಿದ್ದಳು.

ಮಗಳು ಜಾರಿ ಬಿದ್ದ ಕೂಡಲೇ ಅಪ್ಪ ರೈಲಿನ ಚೈನ್ ಹಿಡಿದು ಎಳೆದಿದ್ದಾನೆ. ನಂತರ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ. ಅಷ್ಟರಲ್ಲಿ ರೈಲು 15 ಕಿಲೋಮೀಟರ್‌ ಮುಂದಕ್ಕೆ ಚಲಿಸಿ ನಿಂತಿದೆ.  

ಕೂಡಲೇ ಪೊಲೀಸರು ಮೂರು ಟೀಮ್​​ಗಳಾಗಿ ಕಂದಮ್ಮನನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು. ಎರಡು ಟೀಮ್ ವಾಹನಗಳಲ್ಲಿ ಹುಡುಕಾಟ ನಡೆಸಿತು. ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕಲು ಮುಂದಾಯ್ತು. ಆದ್ರೆ ತಂದೆಯಾದ ಅರವಿಂದ್ ಗಾಡಿ ಹತ್ತದೇ ಮಗಳನ್ನು ಹಳಿಯ ಮೇಲೆ ಹುಡುಕುತ್ತಾ ಒಂದೇ ಸಮನೇ ಓಡಿದ್ದರು. 

ಆತ ಪೊಲೀಸರಿಗಿಂತಲೂ ಮೊದಲೇ ವಿರಾರಿ ಸ್ಟೇಷನ್​​ ಬಳಿಗೆ ಧಾವಿಸಿದ್ದರು. ಬೆಳಕೇ ಇಲ್ಲದ ನಿರ್ಮಾನುಷ ಪ್ರದೇಶದಲ್ಲಿ ಪೊದೆಯಲ್ಲಿ ಮಗಳು ಬಿದ್ದಿದ್ದುದು ಆತನಿಗೇ ಕಂಡಿತ್ತು. ಪೊದೆಯೊಂದರಲ್ಲಿ ಗಾಯಗೊಂಡು ಬಿದ್ದಿದ್ದ ಕಂದಮ್ಮನನ್ನು ಅರವಿಂದ್ ಪತ್ತೆಹಚ್ಚಿ ಬಿಗಿದಪ್ಪಿಕೊಂಡಿದ್ದಾನೆ. ಆದರೆ ರೈಲಿನಿಂದ ಬಿದ್ದ ಕಾರಣ ಗೌರಿಗೆ ಪ್ರಜ್ಞೆ ತಪ್ಪಿ ಹೋಗಿತ್ತು. ಅರವಿಂದ್ ಹಿಂದೆಯೇ ಓಡೋಡಿ ಬಂದ ಪೊಲೀಸರು ಕೂಡಲೇ ಮಗುವನ್ನು ಲಲಿತ್​ಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಚೇತರಿಸಿಕೊಂಡಿದ್ದಾಳೆ.

Leave A Reply