Vijayapura: ‘ತಿ.. ಮುಚ್ಕಂಡ್ ರಾಜಕೀಯ ಮಾಡಿದ್ರೆ ಸರಿ.. ಇಲ್ಲಾಂದ್ರೆ ಪಕ್ಕಾ ನಿಮ್ ಸಿಡಿ ರಿಲೀಸ್ ಮಾಡ್ತೀವಿ’ – ಯತ್ನಾಳ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಮುಸ್ಲಿಂ ಮುಖಂಡ !!

Share the Article

Vijayapura: ರಾಜ್ಯದ ರಾಜಕೀಯದಲ್ಲಿ ‘ಸಿಡಿ’ ವಿಚಾರ ಆಗಾಗ ಸದ್ದುಮಾಡುತ್ತದೆ. ಒಬ್ಬ ರಾಜಕೀಯ ನಾಯಕನ ಮಾನ, ಮರ್ಯಾದೆ ಹರಾಜಾಕಲು ಇದು ಕೆಲವರಿಗೆ ದಿವ್ಯಾಸ್ತ್ರವಿದ್ದಂತೆ ಅನ್ನಬಹುದು. ಈ ಜಾಲಕ್ಕೆ ಸಿಲುಕಿ ಅನೇಕರು ಏನೆಲ್ಲಾ ಆದರು ಎಂದು ನಾವು ನೋಡಿದ್ದೇವೆ. ಆದರೀಗ ಅಚ್ಚರಿ ಎಂಬಂತೆ ಹಿಂದೂ ಫೈರ್ ಬ್ರಾಂಡ್, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal)ಗೆ ಈ ಸಿಡಿ ಕಂಟಕ ಶುರುವಾಗಿದೆ.

ಹೌದು, ವಿಜಯಪುರದಲ್ಲಿ(Vijayapura) ‘ವಕ್ಫ್​ ಹಠಾವೋ ದೇಶ ಬಚಾವೋ’ ಆಂದೋಲನ ಪ್ರತಿಭಟನೆಗೆ ಕರೆ ನೀಡಿರುವ ಯತ್ನಾಳ್ ಬಗ್ಗೆ ಆಕ್ರೋಶಗೊಂಡಿರುವ ಮುಸ್ಲಿಂ ಮುಖಂಡರು, ನಿಮ್ಮ ರಾಜಕಾರಣ ಏನು ಇದೆಯೋ ಅದನ್ನು ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನಿಮ್ಮ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಮುಸ್ಲಿಂ ಮುಖಂಡರಾದ ಎಸ್ ಎಸ್ ಖಾದ್ರಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಿ…ಮುಚ್ಚಿಕೊಂಡು ರಾಜಕಾರಣ ಮಾಡಬೇಕು. ಇಲ್ಲದಿದ್ದರೆ ನವೆಂಬರ್ 06ರಂದು ಸಿಡಿ ಬಿಡುಗಡೆ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದರು. ಇದರಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಡಿ ಕೂಡ ಇದೆಯಾ ಎಂಬ ಅನುಮಾನ ಮೂಡುತ್ತಿದೆ.

Leave A Reply