School Holiday: ಬೆಂಗಳೂರಿನಲ್ಲಿ ನಿರಂತರ ಮಳೆ; ನಾಳೆ ಶಾಲೆಗಳಿಗೆ ರಜೆ

Share the Article

School Holiday: ಬೆಂಗಳೂರಿನಲ್ಲಿ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್‌ ಅವರು ಹೇಳಿದ್ದಾರೆ.

ಬೆಂಗಳೂರಿನ ಎಲ್ಲಾ ಶಾಲೆ, ಪ್ರಾಥಮಿಕ ಕೇಂದ್ರಗಳು, ಅಂಗನವಾಡಿಗಳಿಗೆ ನಾಳೆ ರಜೆ (ಅ.16) ರಜೆ ಘೋಷಣೆ ಮಾಡಲಾಗಿದೆ. ಕಾಲೇಜುಗಳಿಗೆ ರಜೆ ಘೊಷಣೆ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕೆಲ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ನಿಗದಿ ಕಷ್ಟವಾಗಿರುವುದರಿಂದ ಕಾಲೇಜುಗಳಿಗೆ ರಜೆ ಘೊಷಣೆ ಬಗ್ಗೆ ವಿವಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಸೇರಿ ಕೆಲವು ಕಡೆಗಳಲ್ಲಿ ಈಗಾಗಲೇ ಖಾಸಗಿ ಶಾಲೆಗಳು ಸೋಮವಾರದಿಂದ ಪ್ರಾರಂಭಗೊಂಡಿದೆ. ಇಂದು ಭಾರೀ ಮಳೆಯ ಕಾರಣ ಹಾಗೂ ಇನ್ನೂ ಒಂದೆರಡು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ನಾಳೆ ಬೆಂಗಳೂರಿನ ಎಲ್ಲಾ ಎಲ್ಲಾ ಶಾಲೆ, ಪ್ರಾಥಮಿಕ ಕೇಂದ್ರಗಳು, ಅಂಗನವಾಡಿಗಳಿಗೆ  ಕಡ್ಡಾಯವಾಗಿ ರಜೆ ನೀಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Leave A Reply