Shivaraj kumar: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಭೇಟಿ!

Share the Article

Shivaraj kumar: ಕುತ್ತಾರು (kuttaru)ದೇಕ್ಕಾಡಿನಲ್ಲಿರುವ ಕೊರಗಜ್ಜ ದೈವದ (koragajja) ಆದಿಸ್ಥಳಕ್ಕೆ ಶಿವರಾಜ್‌ಕುಮಾರ್ ದಂಪತಿ ಸಮೇತ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ.

ಶಿವರಾಜ್ (Shivaraj kumar) ಅವರು ಇಲ್ಲಿಗೆ ಬಂದಾಗ ಒಂದು ರೀತಿಯ ನೆಮ್ಮದಿ ಇದೆ. ನಂಬಿಕೆಯ ಕಾರಣದಿಂದ ಈ ಭಾಗಕ್ಕೆ ಬಂದಾಗ ಭೇಟಿ ನೀಡುತ್ತೇನೆ ಎಂದು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ಶಿವರಾಜ್ ಕುಮಾರ್ ಅವರು ಅಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿ, ಕರಾವಳಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದೇ ಒಂದು ಖುಷಿಯ ಸಂಗತಿ. ಶೃಂಗೇರಿ ಮಠ, ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ ಕ್ಷೇತ್ರಕ್ಕೆ ಬಿಡುವು ಇದ್ದಾಗ ಬರುತ್ತಿದ್ದೇನೆ. ಇಲ್ಲಿಗೆಲ್ಲ ಭೇಟಿ ಕೊಟ್ಟಾಗ ನಮಗೆ ನೆಮ್ಮದಿ ಸಿಗುತ್ತದೆ. ನಂಬಿಕೆಯೂ ಬಲವಾಗಿರುವುದರಿಂದ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Leave A Reply