KPTCL Jobs 2024: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಭರ್ಜರಿ ಉದ್ಯೋಗ ಅವಕಾಶ: ಕೂಡಲೇ ಅರ್ಜಿ ಸಲ್ಲಿಸಿ
KPTCL Jobs 2024: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದಲ್ಲಿ ಇಲ್ಲೊಂದು ಸುವರ್ಣ ಅವಕಾಶವಿದೆ. ಹೌದು, KPTCL ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯ ಮೂಲಕ 2024 ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಹತೆ 10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21-ಅಕ್ಟೋಬರ್-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-ನವೆಂಬರ್-2024
ಒಟ್ಟು ಹುದ್ದೆಗಳು: 2975
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ (Online)
ಉದ್ಯೋಗ ಸ್ಥಳ – ಕರ್ನಾಟಕ ವಿದ್ಯಾರ್ಹತೆ: 10ನೇ, 12ನೇ, ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್
ವಯೋಮಿತಿ:
2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.
KPTCL ವಯೋಮಾನ ಸಡಿಲಿಕೆ: ಎಸ್‌ಸಿ/ಎಸ್‌ಟಿ/ಕ್ಯಾಟ್-I ಅಭ್ಯರ್ಥಿಗಳು: 05 ವರ್ಷ ಸಡಿಲಿಕೆ.
ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: 03 ವರ್ಷ ಸಡಿಲಿಕೆ
ವೇತನ ಶ್ರೇಣಿ:
1ನೇ ವರ್ಷ: ರೂ. 17,000/-
2ನೇ ವರ್ಷ: ರೂ. 19,000/-
3ನೇ ವರ್ಷ: ರೂ. 21,000/-
ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಶೂನ್ಯ ಶುಲ್ಕ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ. 378 ಶುಲ್ಕ
ಸಾಮಾನ್ಯ/ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: ರೂ. 614 ಶುಲ್ಕ ಕಟ್ಟಬೇಕು
ಆಯ್ಕೆಯ ವಿಧಾನ:
ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿ, ಕನ್ನಡ ಭಾಷಾ ಪರೀಕ್ಷೆ, ಆಪ್ಟಿಟ್ಯೂಡ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.