Bigg Boss Kannada: ನಾನು ಅನ್​ಫಿಟ್ ಅನಿಸುತ್ತಿದೆ; ದೊಡ್ಮನೆಯಲ್ಲಿ ಧನರಾಜ್ ಆಚಾರ್ ಕಣ್ಣೀರು

Share the Article

Bigg Boss Kannada: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಆರಂಭವಾಗಿ ಈಗಾಗಲೇ 2 ವಾರ ಕಳೆದಿದೆ. ಸ್ಪರ್ಧಿಗಳ ನಡುವೆ ಆಟಕ್ಕಿಂತ ಹೆಚ್ಚು ನಾಮಿನೆಟ್ ಬಿಸಿ ಜೋರಾಗಿದೆ. ಇನ್ನು ಸ್ಪರ್ಧಿ ಗಳ ಬಗ್ಗೆ ಹೇಳುವುದಾದರೆ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಆಟವಾಡುತ್ತಿದ್ದಾರೆ. ಇವರಲ್ಲಿ ಮಂಗಳೂರು ಕಡೆಯ ಪುತ್ತೂರಿನ ಯುವಕ ಧನರಾಜ್ ಆಚಾರ್ ಬಿಗ್ ಬಾಸ್ ಮನೆಯಲ್ಲಿ ನಾನು ಈ ಆಟಕ್ಕೆ ಅನ್ ಫಿಟ್ ಎಂದು ಕಣ್ಣೀರು ಹಾಕಿದ್ದಾರೆ. ದೊಡ್ಮನೆಯಲ್ಲಿ ಜಿಂಕೆ ಮರಿ ಎಂದೇ ಕರೆಸಿಕೊಂಡಿರುವ ಇವರು ಇಷ್ಟು ಬೇಗ ಸೋಲು ಒಪ್ಪಿಕೊಂಡ್ರ ಅನ್ನೋದೆ ಪ್ರಶ್ನೆಯಾಗಿದೆ.

ಹೌದು, ಈ ವಾರ ಬಿಗ್ ಬಾಸ್​ ಮನೆಗೆ ಫೋನ್​ಬೂತ್ ಬಂದಿದ್ದು, ಇದರ ಜೊತೆಯೂ ಎಲಿಮಿನೇಷ್ ಪ್ರಕ್ರಿಯೆಯೂ ವಿಭಿನ್ನವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಧನರಾಜ್ ಅವರು ಎಷ್ಟು ಬೇಕು ಅಷ್ಟೇ ಮಾತನಾಡುತ್ತಾರೆ. ಅಲ್ಲದೇ ಅವರು ಮನೆಯಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲದ ಕಾರಣ ಡಲ್ ಆಗಿದ್ದಾರೆ. ಇದಕ್ಕೆ ಕಾರಣ ಹಲವು. ಆದ್ರೆ ಅವರು ಗೊಂದಲದಲ್ಲಿದ್ದಾರೆ ಎನ್ನುವ ಕಾರಣ ನೀಡಿ ಶಿಶಿರ್, ಧನರಾಜ್​​ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಬೇಸರವಾದ ಅವರು ಕಣ್ಣೀರು ಹಾಕಿದ್ದಾರೆ. ‘ನಾನು ಅನ್​ಫಿಟ್ ಅನಿಸುತ್ತಿದೆ’ ಎಂದು ಜಿಂಕೆ ಮರಿ ಧನರಾಜ್ ಆಚಾರ್ ಕಣ್ಣೀರು ಹಾಕಿದ್ದಾರೆ.

Leave A Reply