Dasara Elephant: ಮರಳಿ ಕ್ಯಾಂಪಿನತ್ತ ಸಾಗಿದ ಕ್ಯಾಪ್ಟನ್ ಅಭಿಮನ್ಯು: ಸಾಮಾಜಿಕ ಜಾಲತಾಣದಲ್ಲಿ ಮಾವುತನಿಗೆ ಹೆಚ್ಚಿದ ಹಿಂಬಾಲಕರು
Dasara Elephant: ಮೈಸೂರು ದಸರಾದ(Mysore Dasara) ಪ್ರಮುಖ ಆಕರ್ಷಣೆ ಜಂಬೂ ಸವಾರಿ(Bamboo savari). ಹಾಗಾಗಿ ನವರಾತ್ರಿ ಆರಂಭಕ್ಕೂ ತಿಂಗಳುಗಳೇ ಮುನ್ನ ಶಿಬಿರದಿಂದ ಆನೆಗಳು ತಂಡೋಪ ತಂಡವಾಗಿ ಆಗಮಿಸುತ್ತವೆ. ಅದರೊಂದಿಗೆ ಅದರ ಮಾವುತರು ಹಾಜರಿರುತ್ತಾರೆ. ದಸರಾ ಮುಗಿಯುವ ವರೆಗೆ ಆನೆಗಳಿಗೆ ವಿಶೇಷ ಆಹಾರ(food), ಕಾಳಜಿ ವಹಿಸಲಾಗುತ್ತದೆ. ಅಂಬಾರಿ ಹೊತ್ತ ಅಭಿಮನ್ಯ ಸೇರಿದಂತೆ ಇತರ ಆನೆಗಳು ದಸರಾವನ್ನು ಯಶಸ್ವುಯಾಗಿ ನಡೆಸಿ ಮತ್ತೆ ತಮ್ಮ ತವರಿಗೆ ಮರಳಿದ್ದಾವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡುವ ಹುಣಸೂರು ಅರಣ್ಯ ವಿಭಾಗದ ಕೊಡಗಿನ ಮತ್ತಿಗೋಡು ಕ್ಯಾಂಪಿಗೆ ಒಳಪಡುವ ಕ್ಯಾಪ್ಟನ್ ಅಭಿಮನ್ಯು ಯಶಸ್ವಿಯಾಗಿ ತಾಯಿ ಚಾಮುಂಡಿ ಮೆರವಣಿಗೆ ಮುಗಿಸಿ ಮತ್ತೆ ತನ್ನ ಕ್ಯಾಂಪಿಗೆ ಹೊರಟಿದ್ದಾನೆ.
ಕಳೆದ ಒಂದುವರೆ ತಿಂಗಳಿಂದ ಮೖಸೂರಿನ ವಾತಾವರಣಕ್ಕೆ ಒಗ್ಗಿದ್ದ ಅಂಬಾರಿ ತಂಡದ ಆನೆಗಳು ಲರಿ ಏರಿ ತಮ್ಮ ಕ್ಯಾಂಪಿಗೆ ಹೊರಡಲು ಹಿಂದೇಟು ಹಾಕಿದ್ದ ಆನೆಗಳ ನಡುವೆ ಕ್ಯಾಪ್ಟನ್ ಅಭಿಮನ್ಯು ತನಗೆ ಸಹಕರಿಸಿದ ಎಲ್ಲಾ ಪ್ರವಾಸಿಗರಿಗೆ ಸೆಲ್ಯೂಟ್ ಮಾಡಿ ಶಿಸ್ತಾಗಿ ಮತ್ತಿಗೋಡಿಗೆ ಪ್ರಯಾಣ ಬೆಳೆಸಿದ. ವಿಶೇಷ ಎಂದರೆ ದಸರಾ ಬಳಿಕ ಮುಖ್ಯಮಂತ್ರಿ ಪದಕ ಪಡೆದ ಅಭಿಮನ್ಯು ಮಾವುತ ವಸಂತರಿಗೆ ಫ್ಯಾನ್ ಫಾಲೋವರ್ಸ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ.