Weather report: ಕರ್ನಾಟಕದ ಹವಾಮಾನ ವರದಿ: ಅ. 21 ರಿಂದ ಹಿಂಗಾರು ಮಳೆ ಆರಂಭ ಸಾಧ್ಯತೆ
Weather report: ಕಾಸರಗೋಡು(Kasaragodu), ದಕ್ಷಿಣ ಕನ್ನಡ(Dakshina Kannada) ಹಾಗೂ ಉಡುಪಿ(Udupi) ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆಯಿಂದ ಬಿಟ್ಟು ಬಿಟ್ಟು ವಾಯುಭಾರ ಕುಸಿತದ(Depression) ಮಳೆ(Rain) ಆರಂಭವಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ 16,17 ಹಾಗೂ 18ರಂದು ಭಾರಿ ಮಳೆಯ ಮುನ್ಸೂಚೆನೆ ಇದೆ. ನಂತರ 2 ದಿವಸಗಳ ಮಟ್ಟಿಗೆ ಕಡಿಮೆಯಾದರೂ 21ರಿಂದ ಗುಡುಗು ಮಳೆಯೊಂದಿಗೆ ಹಿಂಗಾರು ಅರಂಭವಾಗುವ ಸಾಧ್ಯತೆ ಇದೆ.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ ವಾಯುಭಾರ ಕುಸಿತದ ಮಳೆ ಆರಂಭವಾಗುವ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜಾಸ್ತಿ ಇರಬಹುದು.
ಈಗಿನಂತೆ ಒಕ್ಟೊಬರ್ 16,17 ಹಾಗೂ 18ರಂದು ಅತಿ ಭಾರಿ ಮಳೆಯ ಮುನ್ಸೂಚೆನೆ ಇದೆ. ನಂತರ ಕಡಿಮೆಯಾದರೂ 21ರಿಂದ ಹಿಂಗಾರು ಆರಂಭವಾಗುವ ಸಾಧ್ಯತೆಗಳಿವೆ.
ಒಳನಾಡು : ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆ ಸಂಜೆ, ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚೆನೆ ಇದೆ.
ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಬೆಳಿಗ್ಗೆಯಿಂದ ವಾಯುಭಾರ ಕುಸಿತದ ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಉತ್ತರ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಒಕ್ಟೊಬರ್ 17ರಂದು ವಾಯುಭಾರ ಕುಸಿತದ ಮಳೆಯ ಮುನ್ಸೂಚನೆ ಇದ್ದರೆ, ದಕ್ಷಿಣ ಒಳನಾಡು ಭಾಗಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು ಒಕ್ಟೊಬರ್ 16 ಹಾಗೂ 17ರಂದು ಭಾರಿ ಮಳೆಯ ಮುನ್ಸೂಚೆನೆ ಇದೆ. 18 ರಿಂದ ಕಡಿಮೆಯಾದರೂ, ಉತ್ತರ ಒಳನಾಡು ಭಾಗಗಳಲ್ಲಿ 19 ಅಥವಾ 20 ರಿಂದ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ 21ರಿಂದ ಹಿಂಗಾರು ಮಳೆ ಆರಂಭವಾಗುವ ಮುನ್ಸೂಚೆನೆ ಇದೆ.