Pakisthan: ಅಕ್ಟೋಬರ್ 15, 16 ರಂದು ದೇಶಾದ್ಯಂತ ಲಾಕ್‌ಡೌನ್ ಘೋಷಣೆ- ಶಾಲೆ, ಕಾಲೇಜು, ಹೋಟೆಲ್, ಮದುವೆ ಎಲ್ಲಾ ಬಂದ್- ಕಾರಣವೇನು?

Pakisthan: ದೇಶಾದ್ಯಂತ ಅಕ್ಟೋಬರ್ 15 ಹಾಗೂ 16 ರಂದು ಎರಡು ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ, ಮದುವೆಗಳಿಗೂ ನಿಷೇಧ ಹೇರಲಾಗಿದೆ. ಹಾಗಂತ ಇದು ಭಾರತದಲ್ಲಿ ಅಲ್ಲ. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ.

ಹೌದು, ಪಾಕಿಸ್ತಾನದ(Pakisthan) ಇಸ್ಲಾಮಾಬಾದ್ ನಲ್ಲಿ ಅಕ್ಟೋಬರ್ 15 ಹಾಗೂ 16 ರಂದು ನಡೆಯಲಿರುವ ಎಸ್ ಸಿಒ ಶೃಂಗಸಭೆ ಹಿನ್ನೆಲೆಯಲ್ಲಿ ಎರಡು ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ, ಮದುವೆಗಳಿಗೂ ನಿಷೇಧ ಹೇರಲಾಗಿದೆ.
ಅಂದಹಾಗೆ ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರ ಇತ್ತೀಚಿನ ಭಯೋತ್ಪಾದಕ ದಾಳಿಗಳು ಮತ್ತು ರಾಜಕೀಯ ಪ್ರತಿಭಟನೆಗಳಿಂದಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ನಿರ್ಧರಿಸಿದೆ. ಹತ್ತು ಸಾವಿರ ಮಿಲಿಟರಿ ಸಿಬ್ಬಂದಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ.