Bigg Boss: ಯಪ್ಪಾ.. ಬಿಗ್ ಬಾಸ್ ಶೋನಲ್ಲಿ ಕಿಚ್ಚನಿಗೆ ಹೀಗೆಲ್ಲಾ ಅವಮಾನ ಆಯ್ತಾ? ಈ ಬಲವಾದ ಕಾರಣಕ್ಕಾಗೇ ಕಿಚ್ಚ ಹೊರಹೋದದ್ದಂತೆ !! ಇಲ್ಲಿದೆ ನೋಡಿ ಶಾಕಿಂಗ್ ವಿಷ್ಯ !!
Bigg Boss: ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್(Bigg Boss) ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್ ಇದೀಗ ಮುಂದಿನ ಸೀಸನ್ ಮೂಲಕ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ ಹಿಂದೆ ಬೇರೆಯೇ ಬಲವಾದ ಕಾರಣವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಿಚ್ಚನಿಗೆ ತುಂಬಾ ಅವಮಾನ ಆದ ಕಾರಣದಿಂದಲೇ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಹೌದು, ಆಪ್ತ ಮೂಲಗಳ ಪ್ರಕಾರ, ಬಿಗ್ ಬಾಸ್ ಶೋನಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಸುದೀಪ್ ಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾಡಿದ ಟ್ವೀಟ್ ಕೂಡ ಇಂಬು ನೀಡಿದೆ.
ಯಸ್, ಸುದೀಪ್ ಹೇಳುವ ಸಣ್ಣ ಪುಟ್ಟ ಚೇಂಜಸ್ ಗೆ ಶೋ ಆಯೋಜಕರು ಸಹಕರಿಸುತ್ತಿರಲಿಲ್ಲ ಎನ್ನಲಾಗುತ್ತಿದೆ. ಇದು ಹೆಸರಿಗಷ್ಟೇ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಆಗಿದ್ದು, ತಮಿಳು ಹಾಗೂ ಮರಾಠಿಗರ ಕಪಿಮುಷ್ಠಿಯಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಶೋ ಡೈರೆಕ್ಟರ್ ಪ್ರಕಾಶ್ ತಮಿಳಿಗರು. ಶೋ ಆಯೋಜಕರಾದ ಸುಶ್ಮಾ ಮರಾಠಿಗರು. ಈ ಬಾರಿಯ ಶೋನಲ್ಲಿ ಕನ್ನಡ ತನಕ್ಕೆ ಧಕ್ಕೆ ಉಂಟಾಗಿರುವ ಆರೋಪವಿದೆ. ಕಂಟೆಸ್ಟೆಂಟ್ ಗಳಿಗೆ ಕನ್ನಡ ಬಳಕೆಗೆ ಸುದೀಪ್ ಮನವಿ ಮಾಡಿದ್ದರಂತೆ. ಆದರೂ ಸಹ ಕಂಟೆಸ್ಟೆಂಟ್ಸ್ ಇಂಗ್ಲಿಷ್ ಭಾಷೆಯನ್ನ ಹೆಚ್ಚಾಗಿ ಬಳಸುತ್ತಿದ್ದಾರೆ.
ಅಲ್ಲದೆ ನರಕ ಕಾನ್ಸೆಪ್ಟ್ ಅಂದಾಗ ಅಲ್ಲಿ ಮಹಿಳೆಯರಿಗೆ ಟಾಯ್ಲೆಟ್ ವ್ಯವಸ್ಥೆ ಮಾಡಲು ಕಿಚ್ಚ ಸುದೀಪ್ ಹೇಳಿದ್ದರಂತೆ. ಕಿಚ್ಚನ ಮಾತಿಗೆ ಕ್ಯಾರೆ ಅನ್ನದ ಬಿಗ್ ಬಾಸ್ ಆಯೋಜಕರು ಅದಕ್ಕೆ ವ್ಯವಸ್ಥೆ ಕಲ್ಪಿಸಲಿಲ್ಲವಂತೆ. ನರಕದಲ್ಲಿನ ಸ್ಪರ್ಧಿಗಳನ್ನು ವೀಕೆಂಡ್ ಎಪಿಸೋಡ್ ವೇಳೆ ಕೂರಿಸಿ ಮಾತನಾಡಿಸಲು ಸುದೀಪ್ ತಿಳಿಸಿದ್ದರಂತೆ. ಇದೂ ಕೂಡ ಕಿಚ್ಚನ ಮಾತಿಗೆ ವಿರುದ್ಧವಾಗಿಯೇ ನಡೆಯಿತು ಎನ್ನಲಾಗಿದೆ.
ಜೊತೆಗೆ ಸ್ಪರ್ಧಿಗಳಿಗೆ ಬರುವ ಲೀಗಲ್ ನೋಟಿಸ್ ಗಳ ಬಗ್ಗೆಯೂ ಸುದೀಪ್ ಗೆ ಅಸಮಾಧಾನ ಉಂಟಾಗಿದೆ. ಅದಕ್ಕೆ ಉತ್ತರ ನೀಡುವ ಲೀಗಲ್ ಟೀಮ್ ಸ್ಟ್ರಾಂಗ್ ಆಗಿಲ್ಲ ಎನ್ನಲಾಗ್ತಿದೆ. ಕ್ರಿಯೇಟಿವ್ ಪೋರ್ಷನ್ ಗಷ್ಟೇ ಕಲರ್ಸ್ ಕನ್ನಡ ಸೀಮಿತವಾಗಿದ್ದು, ಕಮರ್ಷಿಯಲ್ ನಿರ್ಧಾರಗಳನ್ನ ತೆಗೆದುಕೊಳ್ಳೋದು ಮುಂಬೈ ಮೂಲದ ಎಂಡಮಾಲ್ ಕಂಪನಿಗೆ ಬಿಟ್ಟಿದ್ದಂತೆ.
ಈ ಎಲ್ಲಾ ಕಾರಣಗಳಿಂದ ಮನ ನೊಂದ ಕಿಚ್ಚ ವಿದಾಯದ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳೆ ನಿಮ್ಮ ಆಟಕ್ಕೆ ಸುದೀಪ್ ನಿರೂಪಣೆ ನಿಲ್ಲಿಸಬೇಕಾಯಿತು. ಅವರಿಗೆ ಮಾಡಿದ ಅವಮಾನ ಸಹಿಸುವುದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳು ನಿರ್ದೇಶಕರೇ ಮೊದಲು ಬಿಗ್ ಬಾಸ್ ಬಿಡಿ, ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
ಅಂದಹಾಗೆ ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ. ಕನ್ನಡದ ಪರವಾಗಿ ಅವರು ಧ್ವನಿ ಎತ್ತುತ್ತಾರೆ. ಅವರು ಈ ಮೊದಲು ಬಿಗ್ ಬಾಸ್ಗೂ ಹೋಗಿ ಬಂದಿದ್ದಾರೆ. ಹೀಗಾಗಿ, ಅವರ ಜನಪ್ರಿಯತೆ ಹೆಚ್ಚಿದೆ. ಅಸಲಿಗೆ ಬಿಗ್ ಬಾಸ್ನಲ್ಲಿ ಏನಾಯ್ತು? ಅಲ್ಲಿ ನಡೆದ ಘಟನೆ ಏನು ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇಂದು (ಅಕ್ಟೋಬರ್ 14) ರೂಪೇಶ್ ರಾಜಣ್ಣ ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆ ಇದೆ.