Kiccha Sudeep: ದಿಢೀರ್ ಎಂದು ಬಿಗ್ ಬಾಸ್’ಗೆ ವಿದಾಯ ಹೇಳಿದ ಸುದೀಪ್ – ಟ್ವೀಟ್ ಮೂಲಕ ಕಿಚ್ಚನಿಂದ ಅಧಿಕೃತ ಘೋಷಣೆ!! ಕಾರಣ ಹೀಗಿದೆ
Kiccha Sudeep: ಬಿಗ್ ಬಾಸ್ ಕನ್ನಡ ಶೋ ಅಂದ್ರೆ ಯಾರು ನೆನಪಾಗುತ್ತಾರೋ ಇಲ್ಲ ಗೊತ್ತಿಲ್ಲ. ಆದರೆ ಥಟ್ ಅಂತ ನೆನಪಾಗುವುದೇ ಕಿಚ್ಚ ಸುದೀಪ್(Kiccha Sudeep). ಕಳೆದ ಹತ್ತು ವರ್ಷದಿಂದ ಅವರು ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಬಿಗ್ ಬಾಸ್(Bigg Boss)ನಲ್ಲಿ ವಾರದ ಕಥೆ ಕಿಚ್ಚನ ಜೊತೆಗೆ ಪಂಚಾಯ್ತಿ ಕೇಳುವುದಕ್ಕೇನೆ ಚೆಂದ. ಅದೆಷ್ಟೋ ಅಭಿಮಾನಿಗಳು ಅವರ ಪಂಚಾಯ್ತಿಗಾಗಿ ಕಾಯುತ್ತಿರುತ್ತಾರೆ. ಕೆಲವೊಂದು ವಾರ ಅವರು ಬಾರದೆ ಇದ್ದಾಗ ಬಿಗ್ ಬಾಸ್ ಅಷ್ಟಾಗಿ ಖುಷಿ ಕೊಡೋದೆ ಇಲ್ಲ. ಬಿಗ್ ಬಾಸ್ ಮನೆಯೂ ಬಿಕೋ ಎನ್ನುತ್ತದೆ. ಆದರೀಗ ಇದೆಲ್ಲದರ ನಡುವೆಯೇ ಕಿಚ್ಚ ಸುದೀಪ್ ಬಿಗ್ಬಾಸ್ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ.
ಹೌದು, ಈ ಕುರಿತು ಸುದೀಪ್ (Kichcha Sudeep) ಟ್ವೀಟ್ (Tweet) ಮಾಡಿದ್ದು, ಬಿಗ್ ಬಾಸ್ (Bigg Boss) ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ.
ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್ (Bigg Boss). ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ (Bigg Boss) ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಸುದೀಪ್ ಈ ನಿರ್ಧಾರ ಅವರ ಅಭಿಮಾನಿಗಳಿಗೆ, ವೀಕ್ಷಕರಿಗೆ ಬೇಸರ ತಂದಿದೆ. ಸುದೀಪ್ ಅವರದ್ದೇ ಆದ ಒಂದು ಸ್ಟೈಲ್ ಇದೆ. ಆ ಗತ್ತು, ಗಾಂಭೀರ್ಯ ಅವರಿಗೆ ಮಾತ್ರ ಬರೋದು. ಪಂಚಾಯ್ತಿ ಕಟ್ಟೆಯಲ್ಲಿ ಅಷ್ಟು ಜನರ ತಪ್ಪನ್ನು ಅರ್ಥ ಮಾಡಿಸುವುದು, ನೋವಾಗದಂತೆ ನೋಡಿಕೊಳ್ಳುವುದು, ಕಾಲೆಳೆಯುವುದು ಅಷ್ಟು ಸುಲಭಕ್ಕೆ, ಇಷ್ಟು ಪರ್ಫೆಕ್ಟ್ ಆಗಿ ಯಾರಿಗೂ ಬರಲು ಸಾಧ್ಯವಿಲ್ಲ. ಬಾದ್ ಶಾ ಸಮಾಜದ ನಡುವೆ ಇರುವುದು ಹಾಗೇ. ಆದರೆ ಇನ್ಮುಂದೆ ನಾವೂ ಕಿಚ್ಚನ ಬಿಗ್ ಬಾಸ್ ಮಿಸ್ ಮಾಡಿಕೊಳ್ಳೋದು ಪಕ್ಕಾ.
Thank you all for the great response shown towards #BBK11.
The TVR (number) speaks in volumes about the love you all have shown towards the show and me.
It's been a great 10+1 years of travel together, and it's time for me to move on with what I need to do. This will be my last… pic.twitter.com/uCV6qch6eS— Kichcha Sudeepa (@KicchaSudeep) October 13, 2024